16 ವರ್ಷಗಳಲ್ಲಿ ಗುಜರಾತ್ ನಲ್ಲಿ 188 ಕಸ್ಟಡಿ ಸಾವುಗಳು: ಶಿಕ್ಷೆಯಾಗಿಲ್ಲ ಯಾರಿಗೂ..!
ಸಂಜೀವ್ ಭಟ್ ಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಕೋರ್ಟ್
ಹೊಸದಿಲ್ಲಿ, ಜೂ.21: ಸುಮಾರು 30 ವರ್ಷಗಳಷ್ಟು ಹಳೆಯ ಪ್ರಕರಣವೊಂದರಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜಾಮ್ ನಗರ ನ್ಯಾಯಾಲಯ ತೀರ್ಪಿತ್ತಿದೆ. ಇದೇ ವೇಳೆ ಎಲ್ಲಾ ಕಸ್ಟಡಿ ಪ್ರಕರಣಗಳಲ್ಲೂ ಇದೇ ರೀತಿಯ ಕ್ರಮ ಕೈಗೊಳ್ಳಲಾಗಿದೆಯೇ ಅಥವಾ ಆರೋಪಿಗಳಿಗೆ ಶಿಕ್ಷೆಯಾಗಿದೆಯೇ ಎಂದು ಗಮನಿಸುವುದಾದರೆ ‘ಇಲ್ಲ’ ಎನ್ನುವ ಉತ್ತರ ಲಭಿಸುತ್ತದೆ.
2001 ಮತ್ತು 2016ರ ನಡುವೆ ಗುಜರಾತ್ ನಲ್ಲಿ 180 ಕಸ್ಟಡಿ ಸಾವು ಪ್ರಕರಣಗಳು ಸಂಭವಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸುತ್ತದೆ. ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ ಅಂಕಿಅಂಶಗಳ ಆಧಾರದಲ್ಲಿ ಈ ವರದಿ ಪ್ರಕಟಿಸಲಾಗಿದೆ. ಆದರೆ ಈ ಸಾವು ಪ್ರಕರಣಕ್ಕೆ ಸಂಬಂಧಿಸಿ ಯಾವೊಬ್ಬ ಪೊಲೀಸ್ ಅಧಿಕಾರಿಯನ್ನೂ ಶಿಕ್ಷಿಸಲಾಗಿಲ್ಲ.
ಇದಿಷ್ಟೇ ಅಲ್ಲದೆ ದೇಶಾದ್ಯಂತದ ಪ್ರಕರಣಗಳ ಬಗೆಗಿನ ಅಂಕಿಅಂಶಗಳೂ ಸಹ ಆಶ್ಚರ್ಯ ತರಿಸುತ್ತದೆ. ಏಕೆಂದರೆ 1557 ಕಸ್ಟಡಿ ಸಾವು ಪ್ರಕರಣಗಳಲ್ಲಿ 26 ಪೊಲೀಸರಿಗೆ ಮಾತ್ರ ಶಿಕ್ಷೆಯಾಗಿದೆ. ಅದರಲ್ಲೂ ಈ ಪ್ರಕರಣಗಳಲ್ಲಿ ಹೆಚ್ಚಿನವು ಉತ್ತರ ಪ್ರದೇಶದಲ್ಲಿ ನಡೆದ ಘಟನೆಗಳು ಎನ್ನುವುದು ಉಲ್ಲೇಖಾರ್ಹ.