ಸೀಟಿಗಾಗಿ ಜಗಳ: ರೈಲಿನಲ್ಲಿ ಪ್ರಯಾಣಿಕನಿಂದ ಸಹಪ್ರಯಾಣಿಕನ ಹತ್ಯೆ
ಛಾಪ್ರಾ(ಬಿಹಾರ),ಜೂ.22: ರೈಲಿನಲ್ಲಿ ಸೀಟಿನ ಕುರಿತು ಆರಂಭಗೊಂಡ ಜಗಳ ವಿಕೋಪಕ್ಕೆ ತಿರುಗಿ ಪ್ರಯಾಣಿಕ ನೋರ್ವ ತನ್ನ ಸಹಪ್ರಯಾಣಿಕನನ್ನು ಚೂರಿಯಿಂದ ಇರಿದು ಹತ್ಯೆಗೈದಿದ್ದಾನೆ. ಶುಕ್ರವಾರ ರಾತ್ರಿ ಪವನ್ ಎಕ್ಸ್ಪ್ರೆಸ್ನ ಸಾಮಾನ್ಯ ಬೋಗಿಯಲ್ಲಿ ಈ ಘಟನೆ ನಡೆದಿದ್ದು,ಕೊಲೆಯಾದ ವ್ಯಕ್ತಿಯ ಶವವು ರೈಲಿನ ಶೌಚಾಲಯದ ಬಳಿ ಪತ್ತೆಯಾಗಿದೆ.
ಕೊಲೆಯಾಗಿರುವ ವ್ಯಕ್ತಿ ಬಿಹಾರದ ದರ್ಭಂಗಾ ನಿವಾಸಿಯಾಗಿದ್ದು,ತನ್ನ ಸೋದರ ಮತ್ತು ಬಂಧುಗಳೊಂದಿಗೆ ಮುಂಬೈಗೆ ಪ್ರಯಾಣಿಸುತ್ತಿದ್ದ ಎಂದು ಪೊಲೀಸರು ತಿಳಿಸಿದರು.
ರೈಲನ್ನು ಹತ್ತಿದ್ದ ಆರೋಪಿಯು ಸೀಟನ್ನು ಬಿಟ್ಟುಕೊಡುವಂತೆ ತನ್ನ ಸೋದರನಿಗೆ ಸೂಚಿಸಿದ್ದ. ಆತ ನಿರಾಕರಿಸಿದಾಗ ವಾದವಿವಾದ ನಡೆದಿತ್ತು. ರೈಲಿನಲ್ಲಿ ಅಶಾಂತಿ ಸೃಷ್ಟಿಸಿದ್ದಕ್ಕಾಗಿ ಪೊಲೀಸರು ಆರೋಪಿಯನ್ನು ಕರೆದೊಯ್ದಿದ್ದರು. ನಂತರ ಚೂರಿ ಇರಿತದಿಂದ ಸಾವನ್ನಪ್ಪಿದ್ದ ಸೋದರನ ಶವ ಟಾಯ್ಲೆಟ್ ಬಳಿ ಪತ್ತೆಯಾಗಿತ್ತು ಎಂದು ಮೃತವ್ಯಕ್ತಿಯ ಸೋದರ ತಿಳಿಸಿದ್ದಾನೆ.
Next Story