ರಾಜಸ್ಥಾನ: ಜೈಲಿನಿಂದ ಮೂವರು ಅತ್ಯಾಚಾರ ಆರೋಪಿಗಳು ಪರಾರಿ
ಕೋಟಾ, ಜೂ. 23: ಪ್ರತ್ಯೇಕ ಅತ್ಯಾಚಾರ ಪ್ರಕರಣದ ಮೂವರು ಆರೋಪಿಗಳು ರಾಜಸ್ಥಾನದ ಝಲ್ವಾರ ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿದ್ದಾರೆ.
ಮೂವರೂ ಝುಲ್ವಾರ್ ಜಿಲ್ಲೆಯ ನಿವಾಸಿಗಳಾಗಿದ್ದು, ಇವರಲ್ಲಿ ಓರ್ವನನ್ನು ಪತ್ತೆ ಮಾಡಲಾಗಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಡಗ್ ಪಟ್ಟಣದ ಬಾಲಮುಕುಂದ್ ರಾಥೋಡ್ (34), ಮೊರಿಯಖೇಡಿ ಗ್ರಾಮದ ದಿನೇಶ್ ಪ್ರಜಾಪತಿ (25) ಹಾಗೂ ಪಿಡಾವ ಪಟ್ಟಣದ ಸೋಹನ್ ಕುಮಾರ್ ಸುಥಾರ್ (27) ಅವರನ್ನು ಬ್ಯಾರಕ್ನಿಂದ ಕರೆದುಕೊಂಡು ಬರುತ್ತಿದ್ದಾಗ ಅವರು ಬ್ಲಾಂಕ್ಲೆಟ್ ಬಳಿಸಿ 18 ಅಡಿ ಎತ್ತರದ ಗೋಡೆ ಹಾರಿ ಪರಾರಿಯಾಗಿದ್ದಾರೆ ಎಂದು ಝಲ್ವಾರ್ ಜಿಲ್ಲಾ ಕಾರಾಗೃಹದ ಉಪ ಅಧೀಕ್ಷಕ ರಾಜ್ಪಾಲ್ ಸಿಂಗ್ ಹೇಳಿದ್ದಾರೆ.
ಸಂಜೆ ರೋಲ್ ಕಾಲ್ ಸಂದರ್ಭ ಮೂವರು ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂತು. ಉಳಿದವರನ್ನು ಇದುವರೆಗೆ ಪತ್ತೆ ಹಚ್ಚಿಲ್ಲ. ಮಧ್ಯಪ್ರದೇಶ ಸೇರಿದಂತೆ ವಿವಿಧ ಪ್ರದೇಶಗಳಿಗೆ ನಾಲ್ಕು ಶೋಧನಾ ತಂಡವನ್ನು ಕಳುಹಿಸಿಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
Next Story