ಕಾರು ಢಿಕ್ಕಿ: ಫುಟ್ ಪಾತ್ ನಲ್ಲಿ ನಿದ್ರಿಸುತ್ತಿದ್ದ 3 ಮಕ್ಕಳು ಮೃತ್ಯು
ಚಾಲಕನ ಥಳಿಸಿ ಹತ್ಯೆ
ಪಾಟ್ನ, ಜೂ.26: ಮಿತಿಮೀರಿದ ವೇಗದಲ್ಲಿ ಸಾಗುತ್ತಿದ್ದ ಕಾರೊಂದು ಫುಟ್ಪಾತ್ನಲ್ಲಿ ಮಲಗಿ ನಿದ್ರಿಸುತ್ತಿದ್ದ ಮಕ್ಕಳ ಮೇಲೆಯೇ ಚಲಿಸಿದ ದುರ್ಘಟನೆಯಲ್ಲಿ ಮೂರು ಮಕ್ಕಳು ಸಾವನ್ನಪ್ಪಿದ್ದರೆ ಒಂದು ಮಗು ಗಾಯಗೊಂಡಿದೆ.
ಕಾರಿನ ಚಾಲಕನನ್ನು ಉದ್ರಿಕ್ತ ಗುಂಪು ಥಳಿಸಿ ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಟ್ನದ ಅಗ್ರಮ್ ಕುವಾನ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಮಕ್ಕಳ ಸಾವಿನಿಂದ ಆಕ್ರೋಶಿತರಾದ ಸ್ಥಳೀಯರು ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿದರಲ್ಲದೆ ಕಾರಿನ ಚಾಲಕನನ್ನು ಹೊರಗೆಳೆದು ಮಾರಣಾಂತಿಕವಾಗಿ ಥಳಿಸಿ ಹತ್ಯೆಗೈದರು ಎಂದು ಪೊಲೀಸರು ಹೇಳಿದ್ದಾರೆ.
ಸ್ಥಳಕ್ಕೆ ಪೊಲೀಸ್ ಉನ್ನತಾಧಿಕಾರಿಗಳು ತೆರಳಿದ್ದು ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.
Next Story