ದಿಲ್ಲಿಯಲ್ಲಿ ವೃದ್ಧ ದಂಪತಿ ಹತ್ಯೆ ಪ್ರಕರಣ: ಮಹಿಳೆ ಮತ್ತು ಆಕೆಯ ಸ್ನೇಹಿತನ ಬಂಧನ
ಹೊಸದಿಲ್ಲಿ, ಜೂ.26: ದಕ್ಷಿಣ ದಿಲ್ಲಿಯ ವಸಂತ್ ವಿಹಾರ್ನಲ್ಲಿ ವೃದ್ಧ ದಂಪತಿ ಹಾಗೂ ಅವರ ಮನೆ ಕೆಲಸದ ಯುವತಿಯ ಹತ್ಯೆ ಪ್ರಕರಣದ ಆರೋಪಿಗಳಾದ ಓರ್ವ ಮಹಿಳೆ ಮತ್ತು ಆಕೆಯ ಸ್ನೇಹಿತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮಹಿಳೆ ಹತ್ಯೆಯಾದ ವೃದ್ಧೆಯ ಸ್ನೇಹಿತೆಯ ಮಗಳು. ಮತ್ತೊಬ್ಬ ವ್ಯಕ್ತಿ ಈಕೆಯ ಸ್ನೇಹಿತ . ಹಣಕ್ಕಾಗಿ ಈ ಹತ್ಯೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದು ಹೆಚ್ಚಿನ ವಿವರ ನೀಡಲು ನಿರಾಕರಿಸಿದ್ದಾರೆ. ಆರೋಪಿಗಳು ಕೊಲೆ ನಡೆಸಿದ ಹಿಂದಿನ ದಿನ ಬೈಕಿನಲ್ಲಿ ಮನೆಗೆ ಆಗಮಿಸಿ ಮನೆಯ ಆವರಣವನ್ನು ಪರಿಶೀಲಿಸಿ ತೆರಳಿರುವುದು ಮನೆಯಲ್ಲಿದ್ದ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಈ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Next Story