ಚಲಿಸುತ್ತಿದ್ದ ಟ್ರಕ್ ನಲ್ಲಿ ಬುಡಕಟ್ಟು ಮಹಿಳೆಯ ಸಾಮೂಹಿಕ ಅತ್ಯಾಚಾರ
ಭೋಪಾಲ, ಜು. 3: ಬುಡಕಟ್ಟು ಮಹಿಳೆಯೋರ್ವರ ಮೇಲೆ ಮೂರು ಜನರ ಗುಂಪು ಚಲಿಸುತ್ತಿರುವ ಟ್ರಕ್ನಲ್ಲಿ ಅತ್ಯಾಚಾರ ಎಸಗಿದ ಘಟನೆ ಭೋಪಾಲದಲ್ಲಿ ವರದಿಯಾಗಿದೆ.
ಮಂಗಳವಾರ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ. ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಭೋಪಾಲದ ಕೊಲುಖೇಡಿ ಪ್ರದೇಶದವರು.
ಮಹಿಳೆ ತನ್ನ ಪತಿಯೊಂದಿಗೆ ಸೋಮವಾರ ರಾತ್ರಿ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಸೆಹೋರೆ ಜಿಲ್ಲೆಯಲ್ಲಿರುವ ತಮ್ಮ ಗ್ರಾಮಕ್ಕೆ ತೆರಳಲು ಖಾಜುರಿ ಪ್ರದೇಶದಿಂದ ದಂಪತಿ ಟ್ರಕ್ನಲ್ಲಿ ಲಿಫ್ಟ್ ಕೇಳಿದ್ದರು ಎಂದು ಖಾಜುರಿ ಪೊಲೀಸ್ ಠಾಣೆಯ ಉಸ್ತುವಾರಿ ಉಪೇಂದ್ರ ಭಾಟಿ ತಿಳಿಸಿದ್ದಾರೆ.
ಆರೋಪಿಗಳಾದ ಸುಭಮ್ ಬಿಟ್ಟು ಹಾಗೂ ಆಕಾಶ್ ದಂಪತಿಯನ್ನು ಟ್ರಕ್ ಹತ್ತಿಸಿಕೊಂಡರು. ಟ್ರಕ್ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದಾಗ ಪತಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆತನನ್ನು ಟ್ರಕ್ನಿಂದ ಹೊರಗೆಸೆದ ಗುಂಪು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿತು. ಅನಂತರ ಮಹಿಳೆಯನ್ನು ಭೋಪಾಲದ ಬೈರಗಢ ಪ್ರದೇಶದಲ್ಲಿ ಹೊರಗೆ ಎಸೆಯಿತು ಎಂದು ಭಾಟಿ ತಿಳಿಸಿದ್ದಾರೆ.
ಮಹಿಳೆ ಮನೆಗೆ ತಲುಪಿದ ಬಳಿಕ ಮಂಗಳವಾರ ಬೆಳಗ್ಗೆ ಪ್ರಕರಣ ದಾಖಲಿಸಿದ್ದಾರೆ.