ಪಿಎಸಿ ಅಧ್ಯಕ್ಷತೆಗೆ ಕಾಂಗ್ರೆಸ್ ನಿಂದ ಅಧೀರ್ ರಂಜನ್ ಚೌಧರಿ ಪ್ರಸ್ತಾಪ
ಹೊಸದಿಲ್ಲಿ, ಜು. 9: ಸಂಸತ್ತಿನ ಸಾರ್ವಜನಿಕ ಲೆಕ್ಕಾಚಾರ ಸಮಿತಿ (ಪಿಎಸಿ)ಗೆ ಅಧೀರ್ ರಂಜನ್ ಚೌಧರಿ ಅವರ ಹೆಸರನ್ನು ಕಾಂಗ್ರೆಸ್ ಪ್ರಸ್ತಾಪಿಸಿದೆ.
‘‘ಸಾರ್ವಜನಿಕ ಲೆಕ್ಕಾಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅಧೀರ್ ಚೌಧರಿ ಅವರ ಹೆಸರನ್ನು ಕಾಂಗ್ರೆಸ್ ಪಕ್ಷ ಪ್ರಸ್ತಾವಿಸಿದೆ’’ ಎಂದು ಮೂಲಗಳು ದೃಢಪಡಿಸಿವೆ.
ಪಶ್ಚಿಮಬಂಗಾಳದ ಪಕ್ಷದ ಸಂಸದರಾಗಿರುವ ಚೌಧರಿ ಲೋಕಸಭೆಯಲ್ಲಿ ಕಾಂಗ್ರೆಸ್ನ ನಾಯಕ ಕೂಡ ಹೌದು.
ಕೇಂದ್ರ ಸರಕಾರದ ಆದಾಯ ಹಾಗೂ ವೆಚ್ಚ ಲೆಕ್ಕಾಚಾರದ ಸಂಸತ್ತಿನ ಆಯ್ದ ಸದಸ್ಯರ ಸಮಿತಿ ಪಿಎಸಿ. ಈ ಸಮಿತಿಯೊಂದಿಗೆ ಅಂದಾಜು ಸಮಿತಿ, ಸಾರ್ವಜನಿಕ ಕಾರ್ಯಗಳನ್ನು ವಹಿಸುವ ಸಮಿತಿ ಭಾರತೀಯ ಸಂಸತ್ತಿನ ಸ್ಥಾಯಿ ಸಮಿತಿಗಳಾಗಿವೆ.
Next Story