ವೀರೇಂದ್ರ ಸೆಹ್ವಾಗ್ ಪತ್ನಿಗೆ 4.5 ಕೋ.ರೂ. ವಂಚನೆ: ದೂರು ದಾಖಲು
ಹೊಸದಿಲ್ಲಿ, ಜು.13: ತನ್ನ ಸಹಿಯನ್ನು ಫೋರ್ಚರಿ ಮಾಡಿ ಸಾಲ ಪಡೆದಿರುವ ಬ್ಯುಸಿನೆಸ್ ಪಾರ್ಟ್ನರ್ ವಿರುದ್ಧ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಪತ್ನಿ ಆರತಿ ವಂಚನೆ ದೂರು ದಾಖಲಿಸಿದ್ದಾರೆ.
ತನಗೆ ಮಾಹಿತಿಯನ್ನೂ ನೀಡದೆ, ತನ್ನ ಸಹಿಯನ್ನು ಫೋರ್ಚರಿ ಮಾಡಿ 4.5 ಕೋ.ರೂ. ಲೋನ್ ಪಡೆದಿರುವ ಬ್ಯುಸಿನೆಸ್ ಪಾರ್ಟ್ನರ್ ವಿರುದ್ಧ ಆರತಿ ದೂರು ದಾಖಲಿಸಿದ್ದಾರೆ. ಸಾಲವನ್ನು ಮರುಪಾವತಿಯನ್ನೂ ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಸೆಹ್ವಾಗ್ 2019ರ ವಿಶ್ವಕಪ್ ಕ್ರಿಕೆಟ್ನ ವೀಕ್ಷಕವಿವರಣೆ ನೀಡಲು ಪ್ರಸ್ತುತ ಇಂಗ್ಲೆಂಡ್ನಲ್ಲಿದ್ದಾರೆ.
Next Story