ಬಿಹಾರದಲ್ಲಿ ಭೀಕರ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 97ಕ್ಕೆ ಏರಿಕೆ
ಪಾಟ್ನಾ, ಜು.21: ಬಿಹಾರದಲ್ಲಿ ಭಾರೀ ಮಳೆಯಿಂದಾಗಿ ಹಲವು ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 97ಕ್ಕೆ ಏರಿದೆ. ಇನ್ನೂ 6 ನದಿಗಳಲ್ಲಿ ಪ್ರವಾಹ ಕಡಿಮೆಯಾಗಿಲ್ಲ. ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಸೀತಾಮರ್ಹಿಯಲ್ಲಿ 25 ಮಂದಿ ಬಲಿಯಾಗಿದ್ದಾರೆ. ಮಧುಬನಿ 18, ಅರಾರಿಯಾ 12, ಶಿಯೋಹರ್ ಮತ್ತು ದರ್ಭಂಗದಲ್ಲಿ ತಲಾ 10 ಮಂದಿ, ಪುರಿಯಾ 9, ಕೃಷ್ಣಗಂಜ್ 5, ಸುಪಾಲ್ 3, ಪೂರ್ವ ಚಂಪಾರನ್ 2 ಮತ್ತು ಸಹರ್ಸಾದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ವಿಪತ್ತು ನಿರ್ವಹಣಾ ಇಲಾಖೆ(ಡಿಎಂಡಿ) ದೃಢಪಡಿಸಿದೆ.
ಪ್ರವಾಹದಿಂದ 69, 27, 350 ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹಪೀಡಿತ ಮುಜಾಫರ್ಪುರ್ ಮತ್ತು ಸೀತಾಮರ್ಹಿ ನಲ್ಲಿ ಸರಕಾರಿ ಮತ್ತು ಖಾಸಗಿ ಶಾಲೆಗಳನ್ನು ಜುಲೈ 25ರ ತನಕ ಮುಚ್ಚಲಾಗಿದೆ.
Next Story