ಒಮರ್ ಅಬ್ದುಲ್ಲಾ ‘ಬಾಲಿಶ ರಾಜಕಾರಣಿ’ ಎಂದ ಜಮ್ಮು ಕಾಶ್ಮೀರ ರಾಜ್ಯಪಾಲ | Vartha Bharati- ವಾರ್ತಾ ಭಾರತಿ

---

ಒಮರ್ ಅಬ್ದುಲ್ಲಾ ‘ಬಾಲಿಶ ರಾಜಕಾರಣಿ’ ಎಂದ ಜಮ್ಮು ಕಾಶ್ಮೀರ ರಾಜ್ಯಪಾಲ

ಹೊಸದಿಲ್ಲಿ, ಜು.22: “ಪೊಲೀಸರನ್ನು ಟಾರ್ಗೆಟ್ ಮಾಡುವ ಬದಲು ರಾಜ್ಯವನ್ನು ಲೂಟಿಗೈದ ಭ್ರಷ್ಟ ರಾಜಕಾರಣಿಗಳನ್ನು ಹತ್ಯೆ ಮಾಡಿ” ಎಂದು ಉಗ್ರರಿಗೆ ಕರೆ ನೀಡಿದ ತಮ್ಮನ್ನು ಟೀಕಿಸಿದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರನ್ನು “ಎಲ್ಲದರ ಕುರಿತಂತೆಯೂ ಟ್ವೀಟ್ ಮಾಡುವ  ಬಾಲಿಶ ರಾಜಕಾರಣಿ'' ಎಂದು ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. “ನಾನು  ಹುದ್ದೆ ತ್ಯಜಿಸುವ ಮುನ್ನ ಯಾರು ಭ್ರಷ್ಟರೆಂದು ಎಲ್ಲರಿಗೂ ತೋರಿಸುತ್ತೇನೆ'' ಎಂದಿದ್ದಾರೆ.

“ಅವರು ಬಾಲಿಶ ರಾಜಕಾರಣಿ. ಎಲ್ಲದರ ಕುರಿತೂ ಟ್ವೀಟ್ ಮಾಡುತ್ತಾರೆ. ಅವರ ಟ್ವೀಟುಗಳಿಗೆ ದೊರೆತ ಪ್ರತಿಕ್ರಿಯೆ ನೋಡಿ, ನಿಮಗೇ ತಿಳಿಯುವುದು. ಇಲ್ಲಿ ನನ್ನ ಹಿನ್ನೆಲೆ  ನೋಡಿ. ಜನರನ್ನು ಕೇಳಿ, ಅವರ ಬಗ್ಗೆ ಹಾಗೂ ನನ್ನ ಬಗ್ಗೆ'' ಎಂದು ಮಲಿಕ್ ಹೇಳಿದರು.

“ಕಾಶ್ಮೀರವನ್ನು ಆಳಿದ ದೊಡ್ಡ ಕುಟುಂಬಗಳ ಬಳಿ ಅನಿಯಮಿತ ಸಂಪತ್ತಿದೆ'' ಎಂದು ತಮ್ಮ ಹಾಗೂ ಒಮರ್ ಅಬ್ದುಲ್ಲಾ ಅವರ  ಹಿನ್ನೆಲೆ ಕುರಿತಂತೆ ಅವರು ಹೇಳಿದರು.

“ಬಂದೂಕು ಕೈಗೆತ್ತಿಕೊಂಡಿರುವ ಈ ಹುಡುಗರು ತಮ್ಮದೇ ಜನರನ್ನು ಕೊಲ್ಲುತ್ತಿದಾರೆ, ಅವರು  ಭದ್ರತಾ ಅಧಿಕಾರಿಗಳು ಹಾಗೂ ವಿಶೇಷ ಪೊಲೀಸ್ ಅಧಿಕಾರಿಗಳನ್ನು ಕೊಲ್ಲುತ್ತಿದ್ದಾರೆ. ಅವರನ್ನೇಕೆ ಕೊಲ್ಲಬೇಕು ? ಕಾಶ್ಮೀರದ ಸಂಪತ್ತನ್ನು ಲೂಟಿಗೈದವರನ್ನು ಕೊಲ್ಲಲಿ,  ಅವರನ್ನು ಕೊಂದಿದ್ದೀರಾ?'' ಎಂದು ಕಾರ್ಗಿಲ್ ನಲ್ಲಿ ನಡೆದ ಸಮಾರಂಭದಲ್ಲಿ ಮಲಿಕ್ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಒಮರ್ ಅಬ್ದುಲ್ಲಾ, “ಈ ಟ್ವೀಟ್ ಅನ್ನು ಸೇವ್ ಮಾಡಿ. ಇಂದಿನ ನಂತರ  ಜಮ್ಮು ಕಾಶ್ಮೀರದಲ್ಲಿ ಯಾವುದೇ  ರಾಜಕಾರಣಿ ಯಾ ಸೇವೆಯಲ್ಲಿರುವ ಅಥವಾ  ನಿವೃತ್ತ ಅಧಿಕಾರಿಯ ಹತ್ಯೆಯಾದರೆ ಅದನ್ನು ಜಮ್ಮ ಕಾಶ್ಮೀರ ರಾಜ್ಯಪಾಲರ ಆದೇಶದಂತೆ ಮಾಡಲಾಗಿದೆ ಎಂದು ತಿಳಿಯಬೇಕು'' ಎಂದು ಟ್ವೀಟ್ ಮಾಡಿದ್ದರು.

``ಈ ವ್ಯಕ್ತಿ ಸಂವಿಧಾನಿಕ ಹುದ್ದೆ ಹೊಂದಿದ ಜವಾಬ್ದಾರಿ ವ್ಯಕ್ತಿಯಾಗಿದ್ದು, ಭ್ರಷ್ಟರೆಂದು ತಿಳಿಯಲ್ಪಟ್ಟ ರಾಜಕಾರಣಿಗಳನ್ನು ಕೊಲ್ಲುವಂತೆ ಉಗ್ರರಿಗೆ ಹೇಳಿದ್ದಾರೆ. ಇಂತಹ ಮಾತುಗಳನ್ನು ಆಡುವ  ಮೊದಲು ದಿಲ್ಲಿಯಲ್ಲಿ ತಮ್ಮದೇ ಹಿನ್ನೆಲೆಯನ್ನು ಅವರು ಅರಿಯಬೇಕು,'' ಎಂದೂ ಒಮರ್ ಅಬ್ದುಲ್ಲಾ  ಟ್ವೀಟ್ ಮಾಡಿದ್ದರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top