ಎನ್ಡಿಟಿವಿಗೆ ‘ಅತ್ಯಂತ ವಿಶ್ವಾಸಾರ್ಹ ಸುದ್ದಿ ಪ್ರಸಾರಕ’ ಪ್ರಶಸ್ತಿ
ಹೊಸದಿಲ್ಲಿ, ಆ.11: ಎನ್ಡಿಟಿವಿ ಭಾರತದ ಅತ್ಯಂತ ವಿಶ್ವಾಸಾರ್ಹ ಸುದ್ದಿ ಪ್ರಸಾರಕ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ಅಮೆರಿಕದ ಇಂಟರ್ನ್ಯಾಷನಲ್ ಬ್ರಾಂಡ್ ಕನ್ಸಲ್ಟಿಂಗ್ ಕಾರ್ಪೊರೇಶನ್ ಸಂಸ್ಥೆ ತಿಳಿಸಿದೆ.
ಇಂಟರ್ನ್ಯಾಷನಲ್ ಬ್ರಾಂಡ್ ಕನ್ಸಲ್ಟಿಂಗ್ ಕಾರ್ಪೊರೇಶನ್ ನಡೆಸಿದ ಸಮೀಕ್ಷೆಯ ಬಳಿಕ ಎನ್ಡಿಟಿವಿ ಅತ್ಯಂತ ವಿಶ್ವಾಸಾರ್ಹ ಸುದ್ದಿ ಪ್ರಸಾರಕ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಒಟ್ಟು ಮಾರುಕಟ್ಟೆ ಪಾಲು, ಹೊಸ ಕಲ್ಪನೆ, ಕೆಲಸದ ಸಂಸ್ಕೃತಿ, ನಾಯಕತ್ವ, ವ್ಯವಹಾರ ನೀತಿ , ಆಡಳಿತ, ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಮತ್ತು ಪ್ರತಿಷ್ಠೆ- ಈ ಮಾನದಂಡದಡಿ ಸಮೀಕ್ಷೆ ನಡೆಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
Next Story