ಕೇಂದ್ರ ಪಡೆಗಳ ಸಿಬ್ಬಂದಿಯ ನಿವೃತ್ತಿ ವಯಸ್ಸು 60 ವರ್ಷ ನಿಗದಿ
ಹೊಸದಿಲ್ಲಿ, ಆ.20: ಆಂತರಿಕ ವ್ಯವಹಾರಗಳ ಸಚಿವಾಲಯ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿಯ ನಿವೃತ್ತಿ ವಯಸ್ಸನ್ನು 60 ವರ್ಷಕ್ಕೆ ನಿಗದಿಪಡಿಸಿದೆ. ಈ ವಯಸ್ಸು ಎಲ್ಲ ದರ್ಜೆಯ ಸಿಬ್ಬಂದಿಗೂ ಒಂದೇ ಆಗಿರಲಿದೆ.
ಎಂಎಚ್ಎ ಆದೇಶದ ಪ್ರಕಾರ ಈ ನಿವೃತ್ತಿ ವಯಸ್ಸು, ಕೇಂದ್ರ ಮೀಸಲು ಪೊಲೀಸ ಪಡೆ, ಗಡಿ ರಕ್ಷಣಾ ಪಡೆ, ಇಂಡೊ-ಟಿಬೆಟನ್ ಗಡಿ ಪೊಲೀಸ್, ಕೇಂದ್ರ ಕೈಗಾರಿಕ ಭದ್ರತಾ ಪಡೆ, ಸಶಸ್ತ್ರ ಸೀಮಾ ಬಲ ಮತ್ತು ಅಸ್ಸಾಂ ರೈಫಲ್ಸ್ನ ಅರೆಸೈನಿಕ ವಿಭಾಗದ ಸಿಬ್ಬಂದಿಗೆ ಅನ್ವಯವಾಗಲಿದೆ. ಈ ಆದೇಶ ಮಂಗಳವಾರದಿಂದ ಜಾರಿಗೆ ಬರಲಿದೆ. ಸಹಾಯಕ ಕಮಾಂಡೆಂಟ್ (ಐಟಿಬಿಪಿ) ದೇವ್ ಶರ್ಮಾ ಮತ್ತು ಕೇಂದ್ರ ಸರಕಾರದ ಮಧ್ಯೆಯಿದ್ದ ಪ್ರಕರಣದ ವಿಚಾರಣೆ ನಡೆಸಿದ ದಿಲ್ಲಿ ಉಚ್ಚ ನ್ಯಾಯಾಲಯ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಗೆ ನಿವೃತ್ತಿ ವಯಸ್ಸನ್ನು ನಿಗದಿಪಡಿಸುವಂತೆ ಮತ್ತು ಅವುಗಳು ಅನ್ವಯವಾಗುವ ದಿನಾಂಕವನ್ನು ಸೂಚಿಸುವಂತೆ ಆದೇಶಿಸಿತ್ತು.
Next Story