ಶ್ರೀನಗರ, ಜಮ್ಮು ಮೇಯರ್ಗೆ ಸಹಾಯಕ ಸಚಿವ ಸ್ಥಾನಮಾನ
ಜಮ್ಮು,ಆ.21: ಶ್ರೀನಗರ ಮತ್ತು ಜಮ್ಮುವಿನ ಪೌರ ಸಂಸ್ಥೆಗಳ ಮೇಯರ್ಗೆ ಸಹಾಯಕ ಸಚಿವ (ಎಂಒಎಸ್) ಸ್ಥಾನಮಾನ ನೀಡಲಾಗಿದೆ ಎಂದು ಸರಕಾರ ಹೊರಡಿಸಿದ ಅಧಿಕೃತ ಆದೇಶದಲ್ಲಿ ತಿಳಿಸಿದೆ.
ಹೆಚ್ಚುವರಿ ಕಾರ್ಯದರ್ಶಿ ಸುಭಾಶ್ ಚಿಬ್ಬರ್ ಮಂಗಳವಾರ ಹೊರಡಿಸಿರುವ ಆದೇಶದಲ್ಲಿ, ಸಂಬಂಧಪಟ್ಟ ಪ್ರಾಧಿಕಾರದ ಅನುಮತಿಯೊಂದಿಗೆ ಜಮ್ಮು ಮತ್ತು ಕಾಶ್ಮೀರ ಆದ್ಯತಾ ಖಾತರಿಯಲ್ಲಿ ಈ ಬಗ್ಗೆ ಅಗತ್ಯ ಬದಲಾವಣೆಗಳನ್ನು ಮಾಡುವಂತೆ ಆಥಿತ್ಯ ಮತ್ತು ಶಿಷ್ಟಾಚಾರ ಇಲಾಕೆಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಶ್ರೀನಗರ ಮುನ್ಸಿಪಲ್ಕಾರ್ಪೊರೇಶನ್ ಹಾಗೂ ಜಮ್ಮು ಮುನ್ಸಿಪಲ್ ಕಾರ್ಪೊರೇಶನ್ನ ಮೇಯರ್ ಅವರಿಗೆ ಸಹಾಯಕ ಸಚಿವ ಹುದ್ದೆಗೆ ಸಮಾನವಾದ ಸ್ಥಾನಮಾನ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸದ್ಯ ಪೀಪಲ್ಸ್ ಕಾನ್ಫರೆನ್ಸ್ ಪಕ್ಷದ ನಾಯಕ ಜುನೈದ್ ಮಟ್ಟು ಮತ್ತು ಬಿಜೆಪಿಯ ಚಂದರ್ ಮೋಹನ್ ಗುಪ್ತಾ ಕ್ರಮವಾಗಿ ಎಸ್ಎಂಸಿ ಹಾಗೂ ಜೆಎಂಸಿಯ ಮೇಯರ್ಗಳಾಗಿದ್ದಾರೆ.
Next Story