ರೈಲು ನಿಲ್ದಾಣದಲ್ಲಿ ಹಾಡುತ್ತಿದ್ದ ಮಹಿಳೆ ಈಗ ಸೆಲೆಬ್ರಿಟಿ; ಹಿಮೇಶ್ ರೆಶಮಿಯಾ ಚಿತ್ರದಲ್ಲಿ ಹಿನ್ನೆಲೆ ಗಾಯಕಿ
ಕೊಲ್ಕತ್ತಾ: ರೈಲು ನಿಲ್ದಾಣದಲ್ಲಿ ಬೆಂಚ್ ಮೇಲೆ ಕೂತು ಹಾಡುವ ಮೂಲಕ ದೇಶದ ಗಮನ ಸೆಳೆದಿದ್ದ ರಾನು ಮರಿಯಾ ಮಂಡಲ್ ಭವಿಷ್ಯ ಇದೀಗ ಬದಲಾಗಿದೆ. ರೈಲು ಚಲಿಸುವ ಸದ್ದಿನ ಹಿಮ್ಮೆಳದೊಂದಿಗೆ ಲತಾ ಮಂಗೇಶ್ಕರ್ ಅವರ ‘ಏಕ್ ಪ್ಯಾರ್ ಕಾ ನಗ್ಮಾ ಹೈ’ ಹಾಡು ಹಾಡುತ್ತಿರುವುದನ್ನು ವಿಡಿಯೊದಲ್ಲಿ ಸೆರೆಹಿಡಿದ ಪ್ರಯಾಣಿಕರೊಬ್ಬರು ಇದನ್ನು ಸಾಮಾಜಿಕಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಅದು ವೈರಲ್ ಆಗಿತ್ತು.
ಇದೀಗ ಬದಲಾಗಿರುವ ರಾಣು ಸೂಪರ್ಸ್ಟಾರ್ ಸಿಂಗರ್ ರಿಯಾಲಿಟಿ ಶೋದಲ್ಲಿ ಭಾಗವಹಿಸುತ್ತಿದ್ದಾರೆ. ಮಂಡಲ್ ಅವರ ಮೊದಲ ಹಾಡನ್ನು ರೆಕಾರ್ಡಿಂಗ್ ಮಾಡಿಕೊಳ್ಳಲಾಗಿದೆ. ಈಶೋದಲ್ಲಿ ಅವರ ಪ್ರದರ್ಶನ, ತೀರ್ಪುಗಾರರಾದ ಸಂಗೀತ ನಿರ್ದೇಶಕ ಹಾಗೂ ಗಾಯಕ ಹಿಮೇಶ್ ರೆಶಮಿಯಾ ಅವರನ್ನು ಸೆಳೆದಿದ್ದು, ತಮ್ಮ ಮುಂದಿನ ಚಿತ್ರ ‘ಹ್ಯಾಪಿ ಹಾರ್ಡಿ ಅಂಡ್ ಹೀರ್’ಚಿತ್ರದಲ್ಲಿ ಅವಕಾಶ ನೀಡಲು ಮುಂದಾಗಿದ್ದಾರೆ.
‘ತೇರಿ ಮೇರಿ ಕಹಾನಿ’ ಎಂಬ ಹಾಡನ್ನು ಅವರು ಈ ಶೋದಲ್ಲಿ ಹಾಡಿದ್ದರು. ಮಂಡಲ್ ಅವರ ಸಾಧನೆ ಹಾಗು ಹಿಮೇಶ್ ಅವರು ಅವಕಾಶ ನೀಡಿರುವ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
Himesh Reshamia gave her bollywood break & she is singing like professional Singer. #RanuMondal pic.twitter.com/hKjET0GXsK
— Sanju (@Being_Pahadi) August 23, 2019