ಮಿತ್ರಾ ಕುಳಿಗಳ ಭಾವಚಿತ್ರ ಸೆರೆ ಹಿಡಿದ ಚಂದ್ರಯಾನ-2
ಹೊಸದಿಲ್ಲಿ, ಆ. 27: ಭಾರತದ ಎರಡನೇ ಚಂದ್ರಯಾನ ಯೋಜನೆ ಚಂದ್ರಯಾನ-2 ಚಂದ್ರನ ಸುತ್ತ ಇರುವ ಕಕ್ಷೆಯನ್ನು 7 ದಿನಗಳ ಹಿಂದೆ ಪ್ರವೇಶಿಸಿದೆ. ಅಲ್ಲದೆ ಚಂದ್ರನ ಮೇಲ್ಮೈಯ ಛಾಯಾಚಿತ್ರ ತೆಗೆದಿದೆ. ಇದರಲ್ಲಿ ಕೆಲವು ಛಾಯಾಚಿತ್ರಗಳು ಚಂದ್ರನ ಮೇಲ್ಮೈಯಿಂದ ಸುಮಾರು 4,375 ಕಿ.ಮೀ. ಎತ್ತರದಲ್ಲಿ ಭೂಪ್ರದೇಶ ಮ್ಯಾಪಿಂಗ್ ಕ್ಯಾಮರಾದಿಂದ ಸೆರೆ ಹಿಡಿಯಲಾಗಿದೆ ಎಂದು ಇಸ್ರೋ ತಿಳಿಸಿದೆ.
ಭೂಮಿಗೆ ಕಾಣದ, ಚಂದ್ರನ ದೂರದ ಭಾಗದಲ್ಲಿ 6 ಕುಳಿಗಳನ್ನು ಈ ಭಾವಚಿತ್ರ ದಾಖಲಿಸಿದೆ. ಈ 6 ಕುಳಿಗಳಲ್ಲಿ ಒಂದು ಕುಳಿಗೆ ಭಾರತದ ಭೌತಶಾಸ್ತ್ರಜ್ಞ ಶಿಶಿರ್ ಕುಮಾರ್ ಮಿತ್ರಾ ಅವರ ಹೆಸರು ಇರಿಸಲಾಗಿದೆ. ಸೌರ ಹಾಗೂ ಬೃಹ್ಮಾಂಡದ ವಿಕಿರಣಗಳಿಂದ ಆಯಾನೀಕೃತವಾದ ಭೂಮಿಯ ವಾತಾವರಣದ ಪದರ ಐನೋಸ್ಪಿಯರ್ ಬಗೆಗಿನ ಸಂಶೋಧನೆಯಿಂದ ಜನಪ್ರಿಯರಾದವರು ಭಾರತದ ಭೌತಶಾಸ್ತ್ರಜ್ಞ ಶಿಶಿರ್ ಕುಮಾರ್ ಮಿತ್ರಾ. ಐಯನೋಸ್ಪಿಯರ್ನ ಇ-ವಲಯದ ಬಗ್ಗೆ ಮೊದಲ ಸಂಶೋಧನಾತ್ಮಕ ಪುರಾವೆಯನ್ನು ಮಿತ್ರಾ ಹಾಗೂ ಅವರ ತಂಡ 1930ರಲ್ಲಿ ನೀಡಿತ್ತು.
ಸಂದೇಹಕ್ಕೊಳಗಾಗದ ಪದರದಿಂದ ರೇಡಿಯೋ ಅಲೆಗಳು ಪ್ರತಿಧ್ವನಿಸುತ್ತಿರುವುದನ್ನು ಕೂಡ ಅವರು ಪತ್ತೆ ಮಾಡಿದ್ದರು ಹಾಗೂ ಅದನ್ನು ಸಿ-ಲೇಯರ್ ಎಂದು ಮಿತ್ರಾ ಕರೆದಿದ್ದರು.