“5 ಶೇ.”...: ಜಿಡಿಪಿ ವಿಚಾರದಲ್ಲಿ ಮೋದಿ ಸರಕಾರವನ್ನು ವ್ಯಂಗ್ಯವಾಡಿದ ಚಿದಂಬರಂ
ಹೊಸದಿಲ್ಲಿ, ಸೆ.3: ಐಎನ್ ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿ ಆಗಸ್ಟ್ 21ರಿಂದ ಸಿಬಿಐ ಕಸ್ಟಡಿಯಲ್ಲಿರುವ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಕಳೆದ 6 ವರ್ಷಗಳಲ್ಲೇ ಅತ್ಯಂತ ಕುಸಿತ ಕಂಡ ಜಿಡಿಪಿಗೆ ಸಂಬಂಧಿಸಿ ಕೇಂದ್ರ ಸರಕಾರವನ್ನು ವ್ಯಂಗ್ಯವಾಡಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗಾಗಿ ಚಿದಂಬರಂ ಆಗಮಿಸಿದ್ದ ವೇಳೆ ಪತ್ರಕರ್ತರು ಹಲವು ಪ್ರಶ್ನೆಗಳನ್ನು ಕೇಳಿದರು. ಪತ್ರಕರ್ತರ ಪ್ರಶ್ನೆಗೆ ನಗುತ್ತಾ ಉತ್ತರಿಸಿದ ಚಿದಂಬರಂ “5 ಶೇ.” ಎಂದರು.
“ಸರ್ ನಿಮಗೇನಾದರೂ ಹೇಳಲಿಕ್ಕಿದೆಯೇ? ನೀವು 15 ದಿನಗಳಿಂದ ಕಸ್ಟಡಿಯಲ್ಲಿದ್ದೀರಿ” ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ ನಗುತ್ತಾ ಉತ್ತರಿಸಿದ ಚಿದಂಬರಂ “5 ಶೇ.” ಎಂದರು. ನಂತರ ಅವರು “5 ಶೇ. ಎಂದರೇನು?, ನಿಮಗೆ 5 ಶೇ. ಬಗ್ಗೆ ನೆನಪಿದೆಯೇ?” ಎಂದರು ಪ್ರಶ್ನಿಸಿದರು. ಈ ಸಂದರ್ಭ ಪತ್ರಕರ್ತರೊಬ್ಬರು “ಜಿಡಿಪಿ” ಎಂದು ಉತ್ತರಿಸಿದರು.
Next Story