ಟ್ರಾಫಿಕ್ ಪೊಲೀಸ್ ದಂಡ ವಿಧಿಸಿದ್ದಕ್ಕೆ ಬೈಕ್ಗೆ ಬೆಂಕಿ ಹಚ್ಚಿದ ಸವಾರ!
ಹೊಸದಿಲ್ಲಿ, ಸೆ.6: ಇಲ್ಲಿನ ಶೇಕ್ ಸರೈ ಪ್ರದೇಶದಲ್ಲಿ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ದಿಲ್ಲಿ ಪೊಲೀಸರು ದಂಡ ವಿಧಿಸಿದ್ದಕ್ಕೆ ಕೋಪಗೊಂಡ ಸವಾರನೊಬ್ಬ ತನ್ನ ಬೈಕ್ಗೆ ಬೆಂಕಿ ಹಚ್ಚಿರುವ ಘಟನೆ ಗುರುವಾರ ನಡೆದಿದೆ.
ಬೈಕ್ಗೆ ಬೆಂಕಿ ಹಚ್ಚಿರುವ ವ್ಯಕ್ತಿಯು ಮದ್ಯ ಸೇವಿಸಿರುವ ಸ್ಥಿತಿಯಲ್ಲಿದ್ದ. ಕುಡಿದು ವಾಹನ ಚಾಲನೆ, ನೋಂದಾಯಿತ ದಾಖಲೆ ಇಲ್ಲದಿರುವುದು ಹಾಗೂ ಹೆಲ್ಮೆಟ್ ಧರಿಸದೇ ಇರುವುದಕ್ಕೆ ಆತನಿಗೆ 16,000 ರೂ. ದಂಡ ವಿಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮೋಟಾರು ವಾಹಗಳ(ತಿದ್ದುಪಡಿ)ಕಾಯ್ದೆ, 2019ರ ಅಡಿ ಟ್ರಾಫಿಕ್ ನಿಯಮ ಉಲ್ಲಂಘನೆಗೆ ಕಠಿಣ ದಂಡ ಹೇರುವ ಕ್ರಮ ಸೆ.1ರಿಂದ ಜಾರಿಗೆ ಬಂದ ಬಳಿಕ ಪೊಲೀಸರು ರವಿವಾರ ಸಂಜೆಯ ತನಕ 3,900 ಪ್ರಕರಣಗಳನ್ನು ದಾಖಲಿಸಿದ್ದಾರೆ
Next Story