ಓರೆಯಾಗಿ ನಿಂತ ವಿಕ್ರಮ್ ಲ್ಯಾಂಡರ್: ಹೊಸ ಮಾಹಿತಿ ನೀಡಿದ ಇಸ್ರೋ ಅಧಿಕಾರಿ
ಬೆಂಗಳೂರು, ಸೆ.9: ಅಂತಿಮ ಕ್ಷಣದಲ್ಲಿ ಚಂದಿರನ ಅಂಗಳದಲ್ಲಿ ನೆಲೆಯೂರಬೇಕೆನ್ನುವಷ್ಟರಲ್ಲಿ ಇಸ್ರೋ ಸಂಪರ್ಕ ಕಳೆದುಕೊಂಡಿದ್ದ ರೋವರ್ ಪ್ರಜ್ಞಾನ್ ಒಳಗೊಂಡಿದ್ದ ವಿಕ್ರಮ್ ಯೋಜನೆಯಂತೆಯೇ ನಿಲ್ಲಬೇಕಾಗಿದ್ದ ಸ್ಥಳದ ಪಕ್ಕದಲ್ಲಿಯೆ ನಿಂತಿರುವುದು ಆರ್ಬಿಟರ್ ನ ಆನ್-ಬೋರ್ಡ್ ಕ್ಯಾಮರಾ ಕಳುಹಿಸಿದ ಚಿತ್ರಗಳಿಂದ ತಿಳಿದು ಬಂದಿದೆ.
ವಿಕ್ರಮ್ ಲ್ಯಾಂಡರ್ ಚೂರಾಗಿಲ್ಲ, ಬದಲಾಗಿ ಸುರಕ್ಷಿತವಾಗಿದೆ. ಆದರೆ ಸ್ವಲ್ಪ ಓರೆಯಾಗಿ ನಿಂತಿದೆ ಎಂದು ಇಸ್ರೋ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅಂತಿಮ ಕ್ಷಣದಲ್ಲಿ ನಿಗದಿತ ಮಿತಿಗಿಂತ ವಿಕ್ರಮ್ ವೇಗವಾಗಿ ಚಲಿಸಿದ್ದರಿಂದ ಅದು ಚಂದ್ರನ ಮೇಲ್ಮೈಗೆ ಅಪ್ಪಳಿಸಿ ಅದು ಯೋಜನೆಯಂತೆಯೇ ನಿಲ್ಲಬೇಕಾಗಿದ್ದ ಸ್ಥಳದ ಪಕ್ಕದಲ್ಲಿಯೆ ನಿಂತಿರುವುದು ಆರ್ಬಿಟರ್ ನ ಆನ್-ಬೋರ್ಡ್ ಕ್ಯಾಮರಾ ಕಳುಹಿಸಿದ ಚಿತ್ರಗಳಿಂದ ತಿಳಿದು ಬಂದಿದೆ. ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಆ್ಯಂಡ್ ಕಮಾಂಡ್ ನೆಟ್ವರ್ಕ್ ಕೇಂದ್ರದಲ್ಲಿ ಇಸ್ರೋ ತಂಡವೊಂದು ವಿಕ್ರಮ್ ಜತೆ ಮರು ಸಂಪರ್ಕ ಸಾಧಿಸಲು ತನ್ನ ಯತ್ನ ಮುಂದುವರಿಸಿದೆ.
Next Story