2 ಕೋಟಿ ರೂ. ಲಂಚದ ಆಮಿಷ: ಗೃಹಸಚಿವಾಲಯದ ಅಧಿಕಾರಿಯನ್ನು ಬಂಧಿಸಿದ ಸಿಬಿಐ
PHOTO: ndtv.com
ಹೊಸದಿಲ್ಲಿ, ಸೆ.12: ಪ್ರಕರಣವೊಂದರ ಮೇಲೆ ಪ್ರಭಾವ ಬೀರಲು ಸಿಬಿಐ ಅಧಿಕಾರಿಗೆ 2 ಕೋಟಿ ರೂ. ಲಂಚದ ಆಮಿಷವೊಡ್ಡಿದ್ದ ಆರೋಪದಲ್ಲಿ ಗೃಹಸಚಿವಾಲಯದ ಅಧಿಕಾರಿಯೊಬ್ಬರನ್ನು ಸಿಬಿಐ ಇಂದು ಬಂಧಿಸಿದೆ. ಬಂಧಿತ ಅಧಿಕಾರಿಯಿಂದ 16 ಲಕ್ಷ ರೂ.ಗಳನ್ನು ಇದೇ ಸಂದರ್ಭ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಗೃಹ ವ್ಯವಹಾರ ಸಚಿವಾಲಯದ ಅಧಿಕಾರಿಯಾಗಿರುವ ಧೀರಜ್ ಕುಮಾರ್ ಸಿಂಗ್ ಪ್ರಕರಣವೊಂದರ ಮೇಲೆ ಪ್ರಭಾವ ಬೀರಲು ಯತ್ನಿಸಿದವರು ಎಂದು ಆರೋಪಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವರನ್ನೂ ಬಂಧಿಸಲಾಗಿದೆ.
Next Story