''ಇದು ಇಂಡಿಯಾ, ಹಿಂದಿಯಾ ಅಲ್ಲ'' ಅಮಿತ್ ಶಾಗೆ ಸ್ಟಾಲಿನ್ ತಿರುಗೇಟು
ಚೆನ್ನೈ : ''ಇದು ಇಂಡಿಯಾ, ಹಿಂದಿಯಾ ಅಲ್ಲ'' ಹೀಗೆಂದು ಟ್ವೀಟ್ ಮಾಡಿದವರು ಡಿಎಂಕೆ ನಾಯಕ ಎಂಕೆ ಸ್ಟಾಲಿನ್.
ಇಂದು ಹಿಂದಿ ದಿವಸದ ಅಂಗವಾಗಿ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ ''ಭಾರತದ ಅಸ್ಮಿತೆಯನ್ನು ಜಾಗತಿಕವಾಗಿ ಸೂಚಿಸುವ ಒಂದು ಭಾಷೆ ಹಿಂದಿ,'' ಎಂದಿರುವುದನ್ನು ವಿರೋಧಿಸಿ ಸ್ಟಾಲಿನ್ ಮೇಲಿನಂತೆ ಟ್ವೀಟ್ ಮಾಡಿದ್ದಾರಲ್ಲದೆ, ಶಾ ಹೇಳಿಕೆಯ ಕುರಿತು ಪ್ರಧಾನಿ ಸ್ಪಷ್ಟನೆ ನೀಡದೇ ಇದ್ದರೆ ಇನ್ನೊಂದು ಭಾಷಾ ಸಮರದ ಎಚ್ಚರಿಕೆಯನ್ನೂ ನೀಡಿದ್ದಾರೆ.
''ದೇಶದ ಸಮಗ್ರತೆಗೆ ಬೆದರಿಕೆಯೊಡ್ಡುವಂತಹ ಗೃಹ ಸಚಿವರ ಅಭಿಪ್ರಾಯಗಳು ನೋವು ತಂದಿದೆ ಹಾಗೂ ಖಂಡನಾರ್ಹವಾಗಿದೆ. ಹಿಂದಿ ಹೇರಿಕೆಯಿಂದ ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುವ ರಾಜ್ಯಗಳನ್ನು ಒಗ್ಗೂಡಿಸಲು ಡಿಎಂಕೆ ಹಿಂಜರಿಯುವುದಿಲ್ಲ'' ಎಂದು ಸ್ಟಾಲಿನ್ ಹೇಳಿದರು.
Next Story