622 ಅಂಕಗಳಷ್ಟು ಕುಸಿತ ಕಂಡ ಸೆನ್ಸೆಕ್ಸ್
ಮುಂಬೈ : ಮಂಗಳವಾರ ಸೆನ್ಸೆಕ್ಸ್ 622 ಅಂಕಗಳಷ್ಟು ಕುಸಿತ ಕಂಡಿದ್ದು ಈ ದಿನದ ಕನಿಷ್ಠ ಅಂಕಗಳು 36,500 ಆಗಿದ್ದವು ನಿಫ್ಟಿ. ಸೂಚ್ಯಂಕ ಕೂಡ 10,850 ಅಂಕಗಳಿಗಿಂತಲೂ ಕಡಿಮೆಯಾಗಿದೆ. ಬ್ಯಾಂಕಿಂಗ್, ಮೆಟಲ್, ಆಟೋ ಹಾಗೂ ಐಟಿ ಷೇರುಗಳ ಬೆಲೆ ಇಳಿಕೆಯಾಗಿದ್ದು, ರೂಪಾಯಿ ಮೌಲ್ಯವೂ ಬಾಧಿತವಾಗಿ ಅಮೆರಿಕನ್ ಡಾಲರ್ ಎದುರು 71.88ಗೆ ಇಳಿದಿದೆ
ಸೆನ್ಸೆಕ್ಸ್ ಸ್ಟಾಕ್ಗಳ ಪೈಕಿ ಹೀರೋ ಮೋಟೋಕಾರ್ಪ್ ಷೇರು ಬೆಲೆ ಶೇ 4.4ರಷ್ಟು ಇಳಿಕೆ ಕಂಡರೆ ಆಕ್ಸಿಸ್ ಬ್ಯಾಂಕ್ ಶೇರು ಬೆಲೆ ಶೇ 3.75, ಐಸಿಐಸಿಐ, ಎಸ್ಬಿಐ, ಬಜಾಜ್ ಆಟೋ, ಟೆಕ್ ಮಹೀಂದ್ರ, ಟಾಟಾ ಸ್ಟೀಲ್, ಮಾರುತಿ, ಎಚ್ಡಿಎಫ್ಸಿ ಹಾಗೂ ಭಾರತಿ ಏರ್ಟೆಲ್ ಷೇರು ಬೆಲೆಗಳು ಶೇ 2ರಿಂದ ಶೇ 3ರಷ್ಟು ಇಳಿಕೆ ಕಂಡಿವೆ.
Next Story