ನೂತನ ಕಲ್ಲಿದ್ದಲು ಕಾರ್ಯದರ್ಶಿಯಾಗಿ ಅನಿಲ್ ಕುಮಾರ್ ಜೈನ್ ನೇಮಕ
ಹೊಸದಿಲ್ಲಿ,ಸೆ.20: ಹಿರಿಯ ಐಎಎಸ್ ಅಧಿಕಾರ ಅನಿಲ್ ಕುಮಾರ್ ಜೈನ್ ಅವರನ್ನು ನೂತನ ಕಲ್ಲಿದ್ದಲು ಕಾರ್ಯದರ್ಶಿಯಾಗಿ ಸರಕಾರವು ನೇಮಕಗೊಳಿಸಿದೆ. ಸುಮಂತ ಚೌಧುರಿ ಈವರೆಗೆ ಈ ಹುದ್ದೆಯನ್ನು ನಿರ್ವಹಿಸುತ್ತಿದ್ದರು.
1986ರ ಐಎಎಸ್ ತಂಡದ ಮಧ್ಯಪ್ರದೇಶ ಕೇಡರ್ನ ಅಧಿಕಾರಿಯಾಗಿರುವ ಜೈನ್ ಈವರೆಗೆ ಪರಿಸರ,ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಲ್ಲಿ ವಿಶೇಷ ಕಾರ್ಯದರ್ಶಿಯಾಗಿದ್ದರು.
Next Story