ರಾಜಸ್ಥಾನದಲ್ಲಿ ಬಸ್ –ಟ್ರಕ್ ಢಿಕ್ಕಿ: 8 ಸಾವು
ಜೈಪುರ, ಸೆ.23: ಬಸ್ ಮತ್ತು ಟ್ರಕ್ ಪರಸ್ಪರ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ಲಮಾನ ಗ್ರಾಮದಲ್ಲಿ ನಡೆದಿದೆ.
ಬಸ್ ನಲ್ಲಿದ್ದವರು ಬಹುತೇಕ ಮಂದಿ ದಿನಗೂಲಿ ಕಾರ್ಮಿಕರಾಗಿದ್ದು, ಗುಜರಾತ್ ನಿಂದ ಪಾಲಂಪುರ್ ಗೆ ಹೋಗುತ್ತಿದ್ದರು . ಬಸ್ ನಲ್ಲಿ ಒಟ್ಟು 85 ಮಂದಿ ಪ್ರಯಾಣಿಕರಿದ್ದರು. ಅಪಘಾತಕ್ಕೀಡಾದ ಬಸ್ ಜೈಪುರದಿಂದ ಗುಜರಾತ್ ಗೆ ತೆರಳುತ್ತಿತ್ತು. ಎಂದು ತಿಳಿದು ಬಂದಿದೆ.
ಗಾಯಗೊಂಡವರನ್ನು ಜವಾಹರ್ ಲಾಲ್ ನೆಹರೂ ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story