ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭೂಕಂಪ; 5 ಸಾವು
ಕರಾಚಿ, ಸೆ.24: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೀರ್ ಪುರದಲ್ಲಿ ಮಂಗಳವಾರ ಸಂಭವಿಸಿದ ಭೂಕಂಪಕ್ಕೆ ಐವರು ಬಲಿಯಾಗಿದ್ದಾರೆ. 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಅಪರಾಹ್ನ 4:30ರ ಹೊತ್ತಿಗೆ ಪಾಕಿಸ್ತಾನದ ಹಲವಡೆ ಭೂಕಂಪ ಉಂಟಾಗಿದೆ.
ಭೂಕಂಪದಿಂದ ಹಲವು ಕಟ್ಟಡಗಳಿಗೆ ಹಾನಿಯಾಗಿವೆ. ರಿಕ್ಟರ್ ಮಾಪಕದಲ್ಲಿ 6.3ರಷ್ಟು ತೀವ್ರತೆ ದಾಖಲಾಗಿದೆ. ಜಾಟ್ಲಾನ್ ನಲ್ಲಿ ಭೂ ಕಂಪದ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ.
ಉತ್ತರ ಭಾರತದಲ್ಲೂ ಹಲವು ರಾಜ್ಯಗಳಲ್ಲೂ ಭೂಮಿ ಕಂಪಿಸಿದೆ.
Next Story