ಡಿ. 6ರಂದು ರಾಮ ಮಂದಿರ ನಿರ್ಮಾಣ ಆರಂಭ: ಸಾಕ್ಷಿ ಮಹಾರಾಜ್
ಹೊಸದಿಲ್ಲಿ, ಸೆ. 25: ಅಯೋಧ್ಯೆಯಲ್ಲಿ ಡಿಸೆಂಬರ್ 6ರಂದು ರಾಮ ಮಂದಿರ ನಿರ್ಮಾಣ ಆರಂಭಿಸಲಾಗುವುದು ಎಂದು ಉತ್ತರಪ್ರದೇಶದ ಉನ್ನಾವೊದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.
‘‘ರಾಮ ಮಂದಿರ ಪ್ರಕರಣದ ವಿಚಾರಣೆ ಬಹುತೇಕ ಪೂರ್ಣಗೊಂಡಿದೆ. ಡಿಸೆಂಬರ್ 6ರಂದು ರಾಮ ಮಂದಿರ ನಿರ್ಮಾಣ ಆರಂಭಿಸಬಹುದು ಎಂಬುದು ನನ್ನ ಭಾವನೆ’’ ಎಂದು ಅವರು ಹೇಳಿದ್ದಾರೆ. ಹಿಂದುತ್ವ ಮಸೀದಿ ಅಥವಾ ಚರ್ಚ್ ಅನ್ನು ಧ್ವಂಸಗೊಳಿಸಲು ಎಂದಿಗೂ ಪ್ರಯತ್ನಿಸುವುದಿಲ್ಲ ಎಂದು ಕೂಡ ಅವರು ಹೇಳಿದರು. ಜಮ್ಮು ಹಾಗೂ ಕಾಶ್ಮೀರ ವಿಷಯಕ್ಕೆ ಸಂಬಂಧಿಸಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಜಮ್ಮು ಹಾಗೂ ಕಾಶ್ಮೀರ ವಿಷಯದಲ್ಲಿ ಯಾರೊಬ್ಬರ ಮಧ್ಯಸ್ಥಿಕೆ ಕೂಡ ಸ್ವೀಕಾರಾರ್ಹವಲ್ಲ. ಇಮ್ರಾನ್ ಖಾನ್ ಬಯಸಿದರೆ ಪಾಕ್ ಆಕ್ರಮಿತ ಕಾಶ್ಮೀರದೊಂದಿಗೆ ಮಧ್ಯಸ್ಥಿಕೆ ಮಾಡಲಿ. ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ನಾವು ಸ್ವೀಕರಿಸುವುದಿಲ್ಲ ಎಂದು ಅವರು ಹೇಳಿದರು.
Next Story