ಶಸ್ತ್ರಪೂಜೆಯ ನೆಪದಲ್ಲಿ ಗುಂಡು ಹಾರಿಸಿದ 150 ಸಂಘಪರಿವಾರ ಕಾರ್ಯಕರ್ತರ ವಿರುದ್ಧ ಎಫ್ಐಆರ್
ಗ್ವಾಲಿಯರ್, ಅ.10: ಮಂಗಳವಾರ ದಸರಾ ಆಚರಣೆಯ ಸಂದರ್ಭ ಶಸ್ತ್ರ ಪೂಜೆಯ ನೆಪದಲ್ಲಿ ಇಲ್ಲಿನ ಶಾಲೆಯೊಂದರತ್ತ ಗುಂಡು ಹಾರಿಸಿದ್ದಾರೆನ್ನಲಾದ ವಿಶ್ವ ಹಿಂದು ಪರಿಷದ್ ಹಾಗೂ ಬಜರಂಗದಳದ ಸುಮಾರು 150 ಕಾರ್ಯಕರ್ತರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಆ ದಿನ ಶಸ್ತ್ರ ಪೂಜೆಯ ಅಂಗವಾಗಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಮೆರವಣಿಗೆ ಶಾಲೆಯಲ್ಲಿ ಕೊನೆಗೊಳ್ಳುತ್ತಿದ್ದಂತೆಯೇ ಪೊಲೀಸರ ಎಚ್ಚರಿಕೆಯ ಹೊರತಾಗಿಯೂ ತಮ್ಮಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಲು ಆರಂಭಿಸಿದ್ದರು. ಅವರು ಸುಮಾರು ಏಳು ಸುತ್ತು ಗುಂಡು ಹಾರಿಸಿದ್ದು ಈ ಕುರಿತಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
Next Story