ಪಿಎಂಸಿ ಬ್ಯಾಂಕ್ನ ಮಾಜಿ ಅಧ್ಯಕ್ಷ, ಎಚ್ಡಿಐಎಲ್ನ ನಿರ್ದೇಶಕರಿಗೆ ಅ. 16ರ ವರೆಗೆ ಪೊಲೀಸ್ ಕಸ್ಟಡಿ
ಹೊಸದಿಲ್ಲಿ, ಅ. 14: ಪಿಎಂಸಿ ಬ್ಯಾಂಕ್ನ ಮಾಜಿ ಅಧ್ಯಕ್ಷ ಹಾಗೂ ಎಚ್ಡಿಐಎಲ್ನ ನಿರ್ದೇಶಕರ ಪೊಲೀಸ್ ಕಸ್ಟಡಿಯನ್ನು ನ್ಯಾಯಾಲಯ ಸೋಮವಾರ ಅಕ್ಟೋಬರ್ 16ರ ವರೆಗೆ ವಿಸ್ತರಿಸಿದೆ.
ಎಚ್ಡಿಐಎಲ್ ನಿರ್ದೇಶಕರಾದ ರಾಕೇಶ್ ವಾಧವಾನ್ ಹಾಗೂ ಸಾರಂಗ್ ವಾಧವಾನ್ ಅವರೊಂದಿಗೆ ಪಿಎಂಸಿ ಬ್ಯಾಂಕ್ನ ಮಾಜಿ ಅಧ್ಯಕ್ಷ ವಾರ್ಯಂ ಸಿಂಗ್ ಅವರ ಪೊಲೀಸ್ ಕಸ್ಟಡಿಯನ್ನು ಮುಂಬೈಯ ನ್ಯಾಯಾಲಯ ವಿಸ್ತರಿಸಿದೆ. ನಾವು ಪ್ರತಿ ದಿನ ಹೊಸ ಪುರಾವೆಗಳಿಗಾಗಿ ಶೋಧಿಸುತ್ತಿದ್ದೇವೆ ಹಾಗೂ ಬ್ಯಾಂಕ್ ವಂಚನೆ ಹಗರಣದ ಪ್ರಮುಖ ಆರೋಪಿಗಳಿಂದ ಹೆಚ್ಚು ಮಾಹಿತಿ ಕಲೆ ಹಾಕಲು ಇನ್ನೆರೆಡು ದಿನಗಳ ಕಸ್ಟಡಿಯ ಅಗತ್ಯ ಇದೆ ಎಂದು ತನಿಖಾಧಿಕಾರಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಪಿ ಪರ ವಕೀಲ, ತನ್ನ ಕಕ್ಷಿದಾರರ ಕಸ್ಟಡಿ ವಿಸ್ತರಿಸಲು ಯಾವುದೇ ಆಕ್ಷೇಪ ಇಲ್ಲ. ಆದರೆ, ಅವರು ಪ್ರಕರಣದಲ್ಲಿ ಕೆಲವು ಬೆಳವಣಿಗೆ ಕಾಣಬೇಕು ಎಂದರು.
Next Story