ರೆಡ್ ಕಾರ್ನರ್ ನೋಟಿಸ್ ಪ್ರಶ್ನಿಸಿ ನೀರವ್ ಮೋದಿ ಸಹೋದರಿ ಸಲ್ಲಿಸಿದ ಮನವಿ ತಿರಸ್ಕೃತ
ಹೊಸದಿಲ್ಲಿ, ಅ. 14: ತನ್ನ ವಿರುದ್ಧ ಜಾರಿಗೊಳಿಸಲಾಗಿರುವ ರೆಡ್ ಕಾರ್ನರ್ ನೋಟಿಸ್ ಪ್ರಶ್ನಿಸಿ ನೀರವ್ ಮೋದಿ ಸಹೋದರಿ ಸಲ್ಲಿಸಿರುವ ಮನವಿಯನ್ನು ಇಂಟರ್ಪೋಲ್ ಸೋಮವಾರ ತಿರಸ್ಕರಿಸಿದೆ.
ತನ್ನ ವಿರುದ್ಧ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಆರೋಪ ಪ್ರಶ್ನಿಸಿ ಪೂರ್ವಿ ಮೋದಿ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಇಂಟರ್ಪೋಲ್ ತಿರಸ್ಕರಿಸಿದೆ. ಇದೇ ರೀತಿಯ ಮನವಿಯನ್ನು ನೀರವ್ ಮೋದಿ ಸಹೋದರರಾದ ನೇಹಲ್ ಮೋದಿ ಹಾಗೂ ನೀಶಲ್ ಮೋದಿ ಸಲ್ಲಿಸಿದ್ದಾರೆ.
14 ಸಾವಿರ ಕೋಟಿ ರೂಪಾಯಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ ಹಗರಣಕ್ಕೆ ಸಂಬಂಧಿಸಿ ನೀರವ್ ಮೋದಿ, ಆತನ ಮಾವ ಮೆಹುಲ್ ಚೋಕ್ಸಿ ಹಾಗೂ ಕುಟುಂಬದ ಇತರ ಸದಸ್ಯರು ಭಾರತದ ತನಿಖಾ ಸಂಸ್ಥೆಗಳ ಪರಿಶೀಲನೆಗೆ ಒಳಗಾಗಿದ್ದಾರೆ.
Next Story