ಪಾಕ್ ನಾಯಕತ್ವದಿಂದ ಸರ್ಫರಾಝ್ ಅಹ್ಮದ್ ಉಚ್ಚಾಟನೆ
ಲಾಹೋರ್, ಅ.18: ಟ್ವೆಂಟಿ-20 ಹಾಗೂ ಟೆಸ್ಟ್ ತಂಡದ ನಾಯಕತ್ವದಿಂದ ಸರ್ಫರಾಝ್ ಅಹ್ಮದ್ರನ್ನು ಉಚ್ಚಾಟಿಸಿರುವ ಪಾಕಿಸ್ತಾನ ಮುಂಬರುವ ಆಸ್ಟ್ರೇಲಿಯ ಪ್ರವಾಸಕ್ಕೆ ಬಾಬರ್ ಆಝಂ ಹಾಗೂ ಅಝರ್ ಅಲಿ ಅವರನ್ನು ಕ್ರಮವಾಗಿ ಟ್ವೆಂಟಿ-20 ಹಾಗೂ ಟೆಸ್ಟ್ ತಂಡದ ನಾಯಕನ್ನಾಗಿ ನೇಮಿಸಿದೆ.
ಏಳನೇ ರ್ಯಾಂಕಿನಲ್ಲಿರುವ ಪಾಕಿಸ್ತಾನ 5ನೇ ರ್ಯಾಂಕಿನಲ್ಲಿರುವ ಆಸ್ಟ್ರೇಲಿಯ ವಿರುದ್ಧ 2 ಟೆಸ್ಟ್ಗಳನ್ನು ಬ್ರಿಸ್ಬೇನ್(ನ.21-25) ಹಾಗೂ ಅಡಿಲೇಡ್(ನ.29-ಡಿ.3)ನಲ್ಲಿ ಆಡಲಿದೆ. ನ.3,5 ಹಾಗೂ 8ಂದು ಆಸ್ಟ್ರೇಲಿಯ ವಿರುದ್ಧ 3 ಪಂದ್ಯಗಳ ಟಿ-20 ಸರಣಿಯನ್ನಾಡಲಿದೆ.
"ಪಾಕ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದು ನನಗೆ ಲಭಿಸಿದ್ದ ಗೌರವವಾಗಿತ್ತು. ನಾಯಕರಾಗಿ ಆಯ್ಕೆಯಾಗಿರುವ ಅಝರ್ ಅಲಿ ಹಾಗೂ ಬಾಬರ್ ಆಝಂಗೆ ಶುಭಾಶಯ ಕೋರುವೆ'' ಎಂದು ಕಳೆದ ಕೆಲವು ಸರಣಿಗಳಲ್ಲಿ ಕಳಪೆ ಫಾರ್ಮ್ನಲ್ಲಿದ್ದ ಸರ್ಫರಾಝ್ ಹೇಳಿದ್ದಾರೆ.
Next Story