ಉತ್ತರಾಖಂಡ ಸಚಿವರ ಸಾಮಾಜಿಕ ಜಾಲತಾಣ ಖಾತೆ, ಇಮೇಲ್ಗೆ ಕನ್ನ
ಡೆಹ್ರಾಡೂನ್, ನ.2: ಉತ್ತರಾಖಂಡದ ನಗರಾಭಿವೃದ್ಧಿ ಸಚಿವ ಮದನ ಕೌಶಿಕ್ ಅವರ ಟ್ವಿಟರ್ ಮತ್ತು ಇನ್ಸ್ಟಾಗ್ರಾಂ ಖಾತೆಗಳು ಹಾಗೂ ಇಮೇಲ್ಗಳಿಗೆ ಹ್ಯಾಕರ್ಗಳು ಕನ್ನ ಹಾಕಿದ್ದಾರೆ.
ಹ್ಯಾಕರ್ಗಳು ಗುರುವಾರ ನಸುಕಿನ 2:30ರ ಸುಮಾರಿಗೆ ಈ ಕೃತ್ಯವನ್ನು ನಡೆಸಿದ್ದು,ಅವರ ವಾಟ್ಸ್ಆ್ಯಪ್ ನಂಬರ್ಗಳನ್ನು ಗುರುತಿಸಲಾಗಿದೆ. ಈ ಮಾಹಿತಿಯನ್ನು ಪೊಲೀಸ್ ಅಧಿಕಾರಿಗಳಿಗೆ ನೀಡಲಾಗಿದ್ದು,ಹ್ಯಾಕರ್ಗಳ ವಿರುದ್ಧ ತುರ್ತು ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಕೋರಲಾಗಿದೆ ಎಂದು ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಸುಮಿತ್ ಭಾರ್ಗವ ತಿಳಿಸಿದರು.
ನಗರಾಭಿವೃದ್ಧಿ,ವಸತಿ,ಜನಗಣತಿ,ಚುನಾವಣೆ ಮತ್ತು ಪುನರ್ಸಂಘಟನೆ ಇಲಾಖೆಗಳ ಹೊಣೆಯನ್ನು ಹೊತ್ತಿರುವ ಕೌಶಿಕ್,ಉತ್ತರಾಖಂಡ ಸರಕಾರದ ಅಧಿಕೃತ ವಕ್ತಾರರೂ ಆಗಿದ್ದಾರೆ.
Next Story