ಎಲ್ಜೆಪಿ ಅಧ್ಯಕ್ಷರಾಗಿ ಚಿರಾಗ್ ಪಾಸ್ವಾನ್ ಆಯ್ಕೆ
ಹೊಸದಿಲ್ಲಿ, ನ.5: ಕೇಂದ್ರ ಸಚಿವ ಮತ್ತು ಲೋಕಜನಶಕ್ತಿ ಪಕ್ಷ(ಎಲ್ಜೆಪಿ)ದ ಅಧ್ಯಕ್ಷ ರಾಮ್ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ.
2000ನೇ ಇಸವಿಯಲ್ಲಿ ರಾಮ್ವಿಲಾಸ್ ಪಾಸ್ವಾನ್ ಸ್ಥಾಪಿಸಿದ್ದ ಎಲ್ಜೆಪಿ ಪಕ್ಷ ಬಿಹಾರದ ದಲಿತ ವರ್ಗವೊಂದರ ಬೆಂಬಲ ಪಡೆದಿದ್ದು ಕೇಂದ್ರ ಅಥವಾ ರಾಜ್ಯದಲ್ಲಿ ಸರಕಾರ ರಚಿಸಲು ಮುಂದಾಗುವ ಪಕ್ಷಗಳ ಜೊತೆಗೆ ಮೈತ್ರಿ ಸಾಧಿಸಿಕೊಂಡು ತನ್ನ ನೆಲೆಯನ್ನು ಭದ್ರಪಡಿಸಿಕೊಂಡಿದೆ.
ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಚಿರಾಗ್ ಪಾಸ್ವಾನ್, ಕಳೆದ ಕೆಲವು ಸಮಯಗಳಿಂದ ಪಕ್ಷದ ಪ್ರಮುಖ ನಿರ್ಧಾರ ಕೈಗೊಳ್ಳುವ ನಾಯಕರಾಗಿ ಮುನ್ನೆಲೆಗೆ ಬಂದಿದ್ದರು. ಮಂಗಳವಾರ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಚಿರಾಗ್ ಪಾಸ್ವಾನ್ರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ರಾಮವಿಲಾಸ್ ಪಾಸ್ವಾನ್ ಘೋಷಿಸಿದ್ದಾರೆ.
Next Story