ಜಿಎಸ್ಟಿ ರಿಟರ್ನ್ ಸಲ್ಲಿಕೆಗೆ ಅಂತಿಮಗಡು ವಿಸ್ತರಣೆ
ಫೋಟೋ: financialexpress.com
ಹೊಸದಿಲ್ಲಿ,ನ.14: ತೆರಿಗೆಪಾವತಿದಾರರು ಸಮಾಧಾನದ ನಿಟ್ಟುಸಿರೆಳೆಯುವಂತೆ ಮಾಡುವ ಕ್ರಮವೊಂದರಲ್ಲಿ ಕೇಂದ್ರ ಸರಕಾರವು ಜಿಎಸ್ಟಿಯ ವಾರ್ಷಿಕ ರಿಟರ್ನ್ ಸಲ್ಲಿಕೆಗೆ ಇರುವ ಅಂತಿಮಗಡುವನ್ನು 2017-18ರ ಸಾಲಿನ ವಿತ್ತ ವರ್ಷದಲ್ಲಿ ಡಿಸೆಂಬರ್ 31ಕ್ಕೆ ಹಾಗೂ 2018-19ರ ಹಣಕಾಸು ವರ್ಷದಲ್ಲಿ ಮಾರ್ಚ್ 31ಕ್ಕೆ ಮುಂದೂಡಿದೆ.
ಜಿಎಸ್ಟಿ ಪಾವತಿದಾರರಿಗೆ ರಿಕನ್ಸಿಲಿಯೇಶನ್ ಸ್ಟೇಟ್ ಮೆಂಟ್ ಸಲ್ಲಿಕೆಗೆ ಇರುವ ಗಡುವನ್ನು ಕೂಡಾ ಅದೇ ಪ್ರಕಾರವಾಗಿ ವಿಸ್ತರಿಸಲಾಗಿದೆ. ಈ ಮೊದಲು 2017-18ರ ಸಾಲಿನ ಜಿಎಸ್ಟಿ ರಿಟರ್ನ್ಗೆ 2019ರ ನವೆಂಬರ್ 30ರಂದು ಹಾಗೂ 2018-19ರ ಸಾಲಿಗೆ 2019ರ ಡಿಸಂಬರ್ 31 ಅಂತಿಮ ಗಡುವಾಗಿ ನಿಗದಿಪಡಿಸಿತು. ಜಿಎಸ್ಟಿ ರಿಟರ್ನ್ ಸಲ್ಲಿಕೆಗೆ ಇರುವ ಅಂತಿಮ ಗಡುವನ್ನು ವಿಸ್ತರಿಸಿರುವ ಕುರಿತು ಅಧಿಸೂಚನೆಯನ್ನು ಹೊರಡಿಸಲಾಗಿದೆಯೆಂದು ಮೂಲಗಳು ತಿಳಿಸಿವೆ.
Next Story