ಗಾಂಧೀಜಿಯವರ ಯಂಗ್ ಇಂಡಿಯಾ’ ಕುರಿತು ವಿಶೇಷ ಅಂಚೆ ಲಕೋಟೆ ಬಿಡುಗಡೆ
ಕೋಲ್ಕತಾ, ನ.17: ಮಹಾತ್ಮಾ ಗಾಂಧೀಜಿಯವರ 150ನೇ ಜಯಂತಿ ಪ್ರಯುಕ್ತ ಅವರ ‘ಯಂಗ್ ಇಂಡಿಯಾ’ ನಿಯತಕಾಲಿಕದ ಕುರಿತು ವಿಶೇಷ ಲಕೋಟೆಯನ್ನು ಭಾರತೀಯ ಅಂಚೆ ಇಲಾಖೆಯು ಬಿಡುಗಡೆಗೊಳಿಸಿದೆ.
ಗಾಂಧೀಜಿ ತನ್ನ ಸತ್ಯಾಗ್ರಹ ಮತ್ತು ಅಹಿಂಸೆಯ ಸಿದ್ಧಾಂತವನ್ನು ಹರಡಲು 1919ರಿಂದ 1931ರವರೆಗೂ ‘ಯಂಗ್ ಇಂಡಿಯಾ ’ಸಾಪ್ತಾಹಿಕವನ್ನು ಪ್ರಕಟಿಸಿದ್ದರು.
ಇಲ್ಲಿಯ ಜನರಲ್ ಪೋಸ್ಟ್ ಆಫೀಸ್ನಲ್ಲಿ ನ.16ರಿಂದ 21ರವರೆಗೆ ಆಯೋಜಿಸಲಾಗಿರುವ ಅಂಚೆಚೀಟಿ ಪ್ರದರ್ಶನದಲ್ಲಿ ಶನಿವಾರ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಲಾಯಿತು.
Next Story