'ಮೋದಿ ಹೈ ತೋ ಮುಮ್ಕಿನ್ ಹೈ': ಫಡ್ನವೀಸ್
ಮುಂಬೈ, ನ.23: ಅಚ್ಚರಿಯ ಬೆಳವಣಿಗೆಯಲ್ಲಿ ಇಂದು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದೇವೇಂದ್ರ ಫಡ್ನವೀಸ್, ಪಕ್ಷ ಕಚೇರಿಯೆದುರು ಸೇರಿದ್ದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ "ನಾವು ಸ್ಥಿರ ಸರಕಾರ ನೀಡುತ್ತೇವೆ, ಮೋದಿ ಹೈ ತೋ ಮುಮ್ಕಿನ್ ಹೈ'' ಎಂದಿದ್ದಾರೆ.
ಫಡ್ನವೀಸ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಫಡ್ನವೀಸ್ ಹಾಗೂ ಡೆಪ್ಯುಟಿ ಸೀಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಅಜಿತ್ ಪವಾರ್ ಅವರಿಗೆ ಶುಭಾಶಯ ಸಲ್ಲಿಸಿದರಲ್ಲದೆ ಅವರಿಬ್ಬರೂ ಮಹಾರಾಷ್ಟ್ರದ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುವರು ಎಂಬ ವಿಶ್ವಾಸವಿದೆ ಎಂದು ಹೇಳಿದರು.
Next Story