ಮದುವೆ ದಿಬ್ಬಣ ಅರ್ಧದಲ್ಲೇ ನಿಲ್ಲಿಸಿ ಪ್ರತಿಭಟನೆಯಲ್ಲಿ ಭಾಗಿಯಾದ ಮದುಮಗ
ಮಹೋಬ: ಮದುವೆ ದಿಬ್ಬಣದಲ್ಲಿ ಹೊರಟಿದ್ದ ಮದುಮಗ ಮೆರವಣಿಗೆಯನ್ನು ಅರ್ಧದಲ್ಲಿಯೇ ನಿಲ್ಲಿಸಿ ನಗರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕೆಂಬ ಬೇಡಿಕೆಯಿರಿಸಿ ಹತ್ತು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ನಂತರ ಮದುವೆ ನಡೆಯುವ ಸ್ಥಳಕ್ಕೆ ತೆರಳಿದ ಘಟನೆ ನಡೆದಿದೆ.
ಉತ್ತರ ಪ್ರದೇಶದ ಮಹೋಬ ಎಂಬಲ್ಲಿ ಈ ಘಟನೆ ನಡೆದಿದೆ.
ಮದುವೆ ದಿಬ್ಬಣ ಮುಂದೆ ಸಾಗುತ್ತಿದ್ದಾಗ ಜನರ ಗುಂಪನ್ನು ಗಮನಿಸಿದ ಮದುಮಗ ಏನಾಗುತ್ತಿದೆ ಎಂದು ವಿಚಾರಿಸಿದ್ದು ಮುಷ್ಕರದ ವಿಚಾರ ತಿಳಿಯುತ್ತಲೇ ಮೆರವಣಿಗೆ ನಿಲ್ಲಿಸಿ ಅಲ್ಲಿಗೆ ತೆರಳಿ ಅವರ ಜತೆ ಪ್ರತಿಭಟಿಸಿದ್ದಾನೆ. ಮದುಮಗನ ಈ ನಡೆಯನ್ನು ಹಲವರು ಪ್ರಶಂಸಿಸಿದ್ದಾರೆ.
Next Story