ಪೊಲೀಸರ ಮೇಲೆ ಹೂಮಳೆಗೈದ ಜನತೆ
ಹೈದರಾಬಾದ್, ಡಿ. 6: ಪಶುವೈದ್ಯೆ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಆರೋಪಿಗಳನ್ನು ಎನ್ಕೌಂಟರ್ ನಡೆಸಿದ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ಸ್ಥಳೀಯರು ಹೂವಿನ ಮಳೆಗೈದಿದ್ದಾರೆ.
ನಾಲ್ವರು ಲಾರಿ ಕಾರ್ಮಿಕರಿಂದ ಅತ್ಯಾಚಾರಕ್ಕೊಳಗಾಗಿ ಬರ್ಬರವಾಗಿ ಹತ್ಯೆಯಾದ 26 ವರ್ಷದ ಪಶುವೈದ್ಯೆಗೆ ನ್ಯಾಯ ಒದಗಿಸಿದ ಪೊಲೀಸರ ಮೇಲೆ ಅಂಡರ್ಪಾಸ್ನ ಮೇಲೆ ಜಮಾಯಿಸಿದ ಜನರು ಹೂವಿನ ಮಳೆಗೈದರು. ‘ಜೈ ಪೋಲೀಸ್’ ಹಾಗೂ ‘ಹೈದರಾಬಾದ್ ಪೊಲೀಸ್ ಜಿಂದಾಬಾದ್’ ಎಂದು ಜನರು ಘೋಷಣೆಗಳನ್ನು ಕೂಗಿದರು. ಪಶುವೈದ್ಯ ದಿಶಾ ನಿವಾಸದ ನೆರೆಯ ನಿವಾಸಿಗಳು ಪೊಲೀಸರಿಗೆ ಸಿಹಿ ಹಂಚಿದರು ಹಾಗೂ ಮಹಿಳೆಯರು ಅವರಿಗೆ ರಕ್ಷಾಬಂಧನ ಕಟ್ಟಿದರು.
Next Story