ಟಿಕ್-ಟಾಕ್ ವಿಡಿಯೋ ಶೂಟ್ ಮಾಡುವಾಗ ಗುಂಡು ಸಿಡಿದು ಯುವಕ ಸಾವು
ಲಕ್ನೋ, ಜ. 13: ಟಿಕ್-ಟಾಕ್ ವಿಡಿಯೋ ಶೂಟ್ ಮಾಡುತ್ತಿರುವಾಗ ಗನ್ನಿಂದ ಆಕಸ್ಮಿಕವಾಗಿ ಗುಂಡು ಸಿಡಿದು 18 ವರ್ಷದ ಯುವಕನೋರ್ವ ಮೃತಪಟ್ಟ ಘಟನೆ ಬರೇಲಿಯ ಹಫೀಝ್ಗಂಡ್ನ ಮುಡಿಯಾ ಭಿಕಾಂಪುರದಲ್ಲಿ ಸಂಭವಿಸಿದೆ.
12ನೇ ತರಗತಿ ವಿದ್ಯಾರ್ಥಿಯಾಗಿರುವ ಕೇಶವ್ ಕುಮಾರ್ ಕಾಲೇಜಿನಿಂದ ಮನೆಗೆ ಹಿಂದಿರುಗಿದ ಬಳಿಕ ಟಿಕ್-ಟಾಕ್ ವಿಡಿಯೋ ಶೂಟ್ ಮಾಡಲು ಸೇನಾ ಯೋಧರಾಗಿರುವ ತನ್ನ ತಂದೆಯ ಪರವಾನಿಗೆ ಹೊಂದಿದ ಗನ್ ನೀಡುವಂತೆ ತಾಯಿಯಲ್ಲಿ ವಿನಂತಿಸಿದ್ದ. ಆದರೆ, ತಾಯಿ ಸಾವಿತ್ರಿ ದೇವಿ ಗನ್ ನೀಡಲು ನಿರಾಕರಿಸಿದರು. ಕೊನೆಗೆ ಮನ ಕರಗಿ ಗನ್ ನೀಡಿದ್ದರು. ಗನ್ ಅನ್ನು ಹೆಗಲ ಮೇಲಿರಿಸಿ ಟಿಕ್-ಟಾಕ್ ಶೂಟ್ ಮಾಡುತ್ತಿರುವಾಗ ಗುಂಡು ಆಕಸ್ಮಿಕವಾಗಿ ಸಿಡಿದು ಕೇಶವ್ ಕುಮಾರ್ ಗಂಭೀರ ಗಾಯಗೊಂಡಿದ್ದ. ಕೂಡಲೇ ಆತನನ್ನು ಬರೇಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
Next Story