ಸರಕಾರಿ ಆದೇಶದ ಹೊರತಾಗಿಯೂ ಜಮ್ಮುವಿನಲ್ಲಿ ಇನ್ನೂ ಆರಂಭಗೊಳ್ಳದ ಮೊಬೈಲ್ ಇಂಟರ್ನೆಟ್ ಸೇವೆಗಳು
ಜಮ್ಮು: ಮೊಬೈಲ್ ಇಂಟರ್ನೆಟ್ ಹಾಗೂ ಬ್ರಾಡ್ ಬ್ಯಾಂಡ್ ಸೇವೆಗಳನ್ನು ಜಮ್ಮು ಕಾಶ್ಮೀರದ ಕೆಲ ಭಾಗಗಳಲ್ಲಿ ಮುಖ್ಯವಾಗಿ ಆಸ್ಪತ್ರೆಗಳಲ್ಲಿ ಹಾಗೂ ಬ್ಯಾಂಕುಗಳಲ್ಲಿ ಮರು ಆರಂಭಿಸಲಾಗುವುದು ಎಂದು ಅಲ್ಲಿನ ಆಡಳಿತ ಹೇಳಿದ್ದರೂ ಬುಧವಾರ ಬೆಳಗ್ಗಿನ ತನಕ ಮೊಬೈಲ್ ಹಾಗೂ ಬ್ರಾಡ್ಬ್ಯಾಂಡ್ ಸೇವೆಗಳು ಮರು ಆರಂಭಗೊಂಡಿಲ್ಲ.
ತಮ್ಮ ಮೊಬೈಲ್ ಫೋನ್ಗಳಲ್ಲಿ ಇಂಟರ್ನೆಟ್ನ 'ಡಾಟಾ ಮಾರ್ಕರ್'ಗಳು ಇನ್ನೂ ಕಂಡು ಬರುತ್ತಿಲ್ಲ ಎಂದು ಜಮ್ಮು, ಸಂಬ, ಕಥುವಾ, ಉಧಂಪುರ್ ಹಾಗೂ ರಿಯಾಸಿ ಜಿಲ್ಲೆಗಳ ಜನರು ಹೇಳುತ್ತಿದ್ದಾರೆ.
ಅಂತರ್ಜಾಲ ಸೇವೆಗಳನ್ನು ಆ್ಯಕ್ಟಿವೇಟ್ ಮಾಡಲಾಗಿದೆ, ಆದರೆ ಅವುಗಳು ನಿಧಾನವಾಗಿ ಮರು ಆರಂಭಗೊಳ್ಳಲಿವೆ ಎಂದು ಸ್ಥಳೀಯಾಡಳಿತ ಹೇಳಿಕೊಂಡಿದೆ. ಪ್ರಕ್ರಿಯೆ ಮುಂದುವರಿದಿದೆ ಎಂದು ಜಮ್ಮು ಪ್ರಾಂತ್ಯದ ವಿಭಾಗೀಯ ಆಯುಕ್ತ ಸಂಜೀವ್ ವರ್ಮ ಹೇಳಿದ್ದಾರೆ.
Next Story