ಎನ್‍ ಪಿಆರ್ ಗೆ ಹೆತ್ತವರ ಜನನ ಸ್ಥಳದ ಮಾಹಿತಿ ನೀಡುವುದು ಕಡ್ಡಾಯವಲ್ಲ: ಗೃಹ ಸಚಿವಾಲಯ ಅಧಿಕಾರಿಗಳು | Vartha Bharati- ವಾರ್ತಾ ಭಾರತಿ

ಎನ್‍ ಪಿಆರ್ ಗೆ ಹೆತ್ತವರ ಜನನ ಸ್ಥಳದ ಮಾಹಿತಿ ನೀಡುವುದು ಕಡ್ಡಾಯವಲ್ಲ: ಗೃಹ ಸಚಿವಾಲಯ ಅಧಿಕಾರಿಗಳು

ಹೊಸದಿಲ್ಲಿ: ಪ್ರಸ್ತಾವಿತ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಅಥವಾ ಎನ್‍ ಪಿಆರ್ ಗಾಗಿ ತಂದೆ ಹಾಗೂ ತಾಯಿಯ ಜನನ ಸ್ಥಳದ ಮಾಹಿತಿ ನೀಡಬೇಕಾಗಿರುವುದಕ್ಕೆ ಹಲವು ರಾಜ್ಯಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸುವುದು ಕಡ್ಡಾಯವಲ್ಲ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

ಶುಕ್ರವಾರ ರಾಜಧಾನಿ ದಿಲ್ಲಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಎ. ಕೆ. ಭಲ್ಲಾ ಹಾಗೂ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ  ಅಧಿಕಾರಿಗಳು ಎನ್‍ ಪಿಆರ್‍ ಹಾಗೂ 2021 ಜನಗಣತಿಗಾಗಿ ಅನುಸರಿಸಬೇಕಾದ ಪ್ರಕ್ರಿಯೆಗಳ ಕುರಿತು ಚರ್ಚಿಸಲು  ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ರಾಜಸ್ಥಾನ ಮುಖ್ಯ ಕಾರ್ಯದರ್ಶಿ ಡಿ.ಬಿ. ಗುಪ್ತಾ ಹಾಗೂ ಇತರ ರಾಜ್ಯಗಳ ಕೆಲ ಪ್ರತಿನಿಧಿಗಳು, ಎನ್‍ ಪಿಆರ್‍ ಪ್ರಕ್ರಿಯೆ ವೇಳೆ ಗಣತಿದಾರರು ಕೇಳುವ ಕೆಲ ಪ್ರಶ್ನೆಗಳಿಗೆ ಆಕ್ಷೇಪ ಸೂಚಿಸಿದ್ದರು.

"ಹೆತ್ತವರ ಜನನ ಸ್ಥಳ ಮುಂತಾದ ಪ್ರಶ್ನೆಗಳು ಅಸಮಂಜಸ, ಈ ದೇಶದಲ್ಲಿರುವ ಹಲವಾರು ಮಂದಿಗೆ ತಮ್ಮದೇ ಹುಟ್ಟಿದ ಸ್ಥಳಗಳ ಬಗ್ಗೆ ತಿಳಿದಿಲ್ಲ, ಇಂತಹ ಪ್ರಶ್ನೆಗಳು ಯಾವ ಉದ್ದೇಶ ಈಡೇರಿಸುತ್ತವೆ ಎಂದು ತಿಳಿದಿಲ್ಲವಾದ ಕಾರಣ ಅವುಗಳನ್ನು ತೆಗೆದು ಹಾಕುವಂತೆ ಕೇಳಿಕೊಂಡೆವು'' ಎಂದು ಗುಪ್ತಾ ಹೇಳಿದ್ದಾರೆ.

``ಇಂತಹ ಪ್ರಶ್ನೆಗಳನ್ನು ಹಿಂದೆ ಕೂಡ ಕೇಳಲಾಗಿತ್ತು ಹಾಗೂ ಜನರು ಅದಕ್ಕೆ ಮಾಹಿತಿ ನೀಡಬೇಕೆಂಬುದು ಕಡ್ಡಾಯವಲ್ಲ ಎಂದು ಸಚಿವಾಲಯ ಅಧಿಕಾರಿಗಳು ಹೇಳಿದರು ಹಾಗೂ ಬೇಡವೆಂದಿದ್ದರೆ ಉತ್ತರ ನೀಡದೇ ಇರಬಹುದು, ಅದಕ್ಕೆ ಒತ್ತಾಯ ಪಡಿಸುವಂತಿಲ್ಲವೆಂದರು'' ಎಂದು ಗುಪ್ತಾ ತಿಳಿಸಿದ್ದಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top