ಮುಂಬೈನ ಕಿರುತೆರೆ ನಟಿ ಸೆಜಾಲ್ ಶರ್ಮಾ ಆತ್ಮಹತ್ಯೆ
ಮುಂಬೈ, ಜ.25: ‘‘ದಿಲ್ ತೋ ಹ್ಯಾಪಿ ಹೈ ಜೀ’’ಹೆಸರಿನ ಧಾರಾವಾಹಿಯಲ್ಲಿ ಸಿಮ್ಮಿ ಖೋಸ್ಲಾ ಪಾತ್ರದ ಮೂಲಕ ಜನಪ್ರಿಯತೆ ಪಡೆದಿದ್ದ ಟಿವಿ ನಟಿ ಸೆಜಾಲ್ ಶರ್ಮಾ ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಉದಯಪುರ ಮೂಲದ ಸೆಜಾಲ್ ಶರ್ಮಾ 2017ರಲ್ಲಿ ಮುಂಬೈಗೆ ಬಂದಿದ್ದರು. ನಟಿಯಾಗಿ ತನ್ನ ವೃತ್ತಿಜೀವನವನ್ನು ಆರಂಭಿಸಿದ್ದರು. ಸ್ಟಾರ್ ಪ್ಲಸ್ನಲ್ಲಿ‘‘ದಿಲ್ ತೋ ಹ್ಯಾಪಿ ಹೈ ಜೀ’’ ಧಾರಾವಾಹಿಯಲ್ಲಿ ಮೊದಲ ಬಾರಿ ನಟನೆ ಆರಂಭಿಸಿದ್ದರು. ಕೆಲವು ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದರು.
‘‘ಸೆಜಾಲ್ ಸಾವಿನ ಸುದ್ದಿ ಕೇಳಿ ನನಗೆ ಆಘಾತವಾಯಿತು. 10 ದಿನಗಳ ಹಿಂದೆ ಆಕೆಯನ್ನು ಭೇಟಿಯಾಗಿರುವ ನನಗೆ ಈ ಸುದ್ದಿ ನಂಬಲಾಗುತ್ತಿಲ್ಲ. ನಾವಿಬ್ಬರು ರವಿವಾರ ವ್ಯಾಟ್ಸ್ಆ್ಯಪ್ನಲ್ಲಿ ಚಾಟ್ ಮಾಡಿದ್ದೆವು. 10 ದಿನಗಳ ಹಿಂದೆ ಸೆಜಾಲ್ರನ್ನು ಭೇಟಿಯಾಗಿದ್ದಾಗ ಅವರು ಚೆನ್ನಾಗಿದ್ದರು’’ ಎಂದು ‘‘ದಿಲ್ ತೋ ಹ್ಯಾಪಿ ಹೈ ಜೀ’’ ಧಾರವಾಹಿಯಲ್ಲಿ ಸೆಜಾಲ್ರೊಂದಿಗೆ ನಟಿಸಿರುವ ಅರು ಕೆ. ಶರ್ಮಾ ತಿಳಿಸಿದ್ದಾರೆ.
Next Story