ಕೋಲ್ಕತಾದಲ್ಲಿ ಶಂಕಿತ ಕೊರೋನ ವೈರಸ್ ಸೋಂಕಿಗೆ ಥಾಯ್ಲೆಂಡ್ ಪ್ರಜೆ ಬಲಿ
ಕೋಲ್ಕತಾ, ಜ.28: ಪಶ್ಚಿಮ ಬಂಗಾಳದ ಕೋಲ್ಕತಾದ ಖಾಸಗಿ ಆಸ್ಪತ್ರೆಯಲ್ಲಿ ಥಾಯ್ಲೆಂಡ್ ಪ್ರಜೆಯೊಬ್ಬರು ಸಾವಿಗೀಡಾಗಿದ್ದು, ಆತ ಶಂಕಿತ ಕೊರೋನ ವೈರಸ್ ಸೋಂಕಿನಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
ಕಳೆದ ನವೆಂಬರ್ನಿಂದ ಕೋಲ್ಕತ್ತಾದಲ್ಲಿ ವಾಸಿಸುತ್ತಿದ್ದ ಈತ ಜನವರಿ 21 ರಂದು ನಗರದ ಖಾಸಗಿ ಆಸ್ಪತ್ರೆಗೆ ಉಸಿರಾಟದ ತೊಂದರೆಯಿಂದ ದಾಖಲಾಗಿದ್ದ. ಬಳಿಕ ಹೊಟ್ಟೆ ನೋವು, ವಾಕರಿಕೆ ಮತ್ತು ಜ್ವರದ ಕಾರರಣದಿಂದಾಗಿ ಆತನನ್ನು ಚಿಕಿತ್ಸೆಗಾಗಿ ಐಸಿಯುಗೆ ವರ್ಗಾಯಿಸಲಾಯಿತು.
ಈತನ ಸಾವಿನ ಬಗ್ಗೆ ಥಾಯ್ ಕಾನ್ಸುಲೇಟ್ ಜನರಲ್ ಗೆ ಮಾಹಿತಿ ನೀಡಲಾಗಿದೆ. ಪಶ್ಚಿಮ ಬಂಗಾಳದ ಆರೋಗ್ಯ ಇಲಾಖೆ ಅಧಿಕಾರಿಗಳು ಮೃತರ ಎಲ್ಲಾ ಪರೀಕ್ಷಾ ವರದಿಗಳನ್ನು ಕೋರಿದ್ದಾರೆ.
"ಅಗತ್ಯ ಮಾದರಿಗಳನ್ನು ಪರೀಕ್ಷೆಗಳಿಗಾಗಿ ಸರ್ಕಾರಿ ಬೆಲಿಯಾಘಾಟಾ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ಕಳುಹಿಸಲಾಗಿದೆ. ಫಲಿತಾಂಶಗಳು ಇನ್ನೂ ಬರಬೇಕಿದೆ ”ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Next Story