ಸಾಬರಮತಿಗೆ ಬರಲಿದ್ದಾರೆ ಟ್ರಂಪ್!
ಹೊಸದಿಲ್ಲಿ, ಜ.30: ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗುಜರಾತ್ನ ಸಾಬರಮತಿ ನದಿತೀರಕ್ಕೆ ಭೇಟಿ ನೀಡಲಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಪ್ರಕಟಿಸಿದ್ದಾರೆ.
"ಮೋದಿಯವರು ಸಾಬರಮತಿ ನದಿಯನ್ನು ಏಷ್ಯಾದಲ್ಲೇ ಅತ್ಯಂತ ಸ್ವಚ್ಛ ನದಿಯಾಗಿ ಪರಿವರ್ತಿಸಿದ್ದಾರೆ. ಈಗಾಗಲೇ ಜಪಾನ್ ಪ್ರಧಾನಿ ಹಾಗೂ ಇಸ್ರೇಲ್ ಪ್ರಧಾನಿ ನದಿದಂಡೆಗೆ ಭೇಟಿ ನೀಡಿ ಅದ್ಭುತ ಎಂದು ಬಣ್ಣಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೂಡಾ ಇಲ್ಲಿಗೆ ಭೇಟಿ ನೀಡಲಿದ್ದಾರೆ" ಎಂದು ದೆಹಲಿಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು ಸ್ಪಷ್ಟಪಡಿಸಿದರು.
ಚೀನಾದ ಅಧ್ಯಕ್ಷ ಕ್ಸಿ ಜಿಂಗ್ಪಿಂಗ್ ಸೇರಿದಂತೆ ಭಾರತಕ್ಕೆ ಭೇಟಿ ನೀಡುವ ವಿದೇಶಿ ಗಣ್ಯರ ಜತೆ ಮಾತುಕತೆ ನಡೆಸಲು ಪ್ರಧಾನಿ ಮೋದಿಯವರು ಅಹ್ಮದಾಬಾದ್ ನಗರವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
Next Story