ಲಕ್ನೋ ಸಿವಿಲ್ ನ್ಯಾಯಾಲಯದಲ್ಲಿ ಬಾಂಬ್ ಸ್ಫೋಟ: ಹಲವು ವಕೀಲರಿಗೆ ಗಾಯ
ಲಕ್ನೋ, ಫೆ,13: ಲಕ್ನೋದ ಹಜರತ್ಗಂಜ್ನ ಸಿವಿಲ್ ಕೋರ್ಟ್ನಲ್ಲಿ ಗುರುವಾರ ಬಾಂಬ್ ಸ್ಫೋಟ ಸಂಭವಿಸಿದ್ದು, ಹಲವು ಮಂದಿ ವಕೀಲರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ .
ಉತ್ತರ ಪ್ರದೇಶ ವಿಧಾನಸಭೆಯಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಲಕ್ನೋ ಜಿಲ್ಲಾಧಿಕಾರಿ ಕಚೇರಿ ಪಕ್ಕದ ನ್ಯಾಯಾಲಯದಲ್ಲಿ ಸ್ಪೋಟ ಸಂಭವಿಸಿದೆ
ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಓರ್ವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆತನನ್ನು ಜೀತು ಯಾದವ್ ಎಂದು ಪೊಲೀಸರು ಗುರುತಿಸಿದ್ದಾರೆ. ಆತ ಬಳಸಿದ ಬಾಂಬ್ ಸ್ಥಳೀಯವಾಗಿ ತಯಾರಿಸಲಾಗಿತ್ತು ಎಂದು ತಿಳಿದು ಬಂದಿದೆ
ವಾಜಿರ್ಗಂಜ್ ಪೊಲೀಸರು ಸ್ಥಳದಲ್ಲೇ ಇದ್ದು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ. ಈವರೆಗೆ ಘಟನಾ ಸ್ಥಳದಿಂದ ಮೂರು ಸಜೀವ ಬಾಂಬ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Next Story