ಸುಪ್ರೀಂ ತರಾಟೆಗೆ ಬೆಚ್ಚಿದ ಡಾಟ್: ಶುಕ್ರವಾರವೇ ಅಂತಿಮ ಗಡುವು!
ಹೊಸದಿಲ್ಲಿ,ಫೆ.14: ಟೆಲಿಕಾಂ ಕಂಪನಿಗಳಿಂದ ಬಾಕಿ ಪಾವತಿಯಲ್ಲಿ ವೈಫಲ್ಯಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ತರಾಟೆಗೆತ್ತ್ತಿಕೊಂಡ ಬೆನ್ನಿಗೇ ಶುಕ್ರವಾರ ರಾತ್ರಿ 11:59ರೊಳಗೆ ಎಲ್ಲ ಬಾಕಿಗಳನ್ನು ಪಾವತಿಸುವಂತೆ ಸರಕಾರವು ಈ ಕಂಪನಿಗಳಿಗೆ ತಾಕೀತು ಮಾಡಿದೆ. ನ್ಯಾಯಾಲಯವು ದೂರಸಂಪರ್ಕ ಇಲಾಖೆ (ಡಾಟ್)ಯನ್ನೂ ತರಾಟೆಗೆತ್ತಿಕೊಂಡಿತ್ತು.
ಈ ಸಂಬಂಧ ಡಾಟ್ ಶುಕ್ರವಾರ ರಾತ್ರಿ 11:59ರೊಳಗೆ ಬಾಕಿಗಳನ್ನು ಪಾವತಿಸುವಂತೆ ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಮತ್ತಿತರರಿಗೆ ನೋಟಿಸ್ಗಳನ್ನು ಜಾರಿಗೊಳಿಸಿದೆ.
Next Story