'ವಿಚ್ಛೇದನ' ಕುರಿತು ಮೋಹನ್ ಭಾಗವತ್ ಹೇಳಿಕೆ ವಿರುದ್ಧ ಸೋನಂ ಕಪೂರ್ ಆಕ್ರೋಶ
ಮುಂಬೈ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು `ವಿವಾಹ ವಿಚ್ಛೇದನ' ಕುರಿತಂತೆ ನೀಡಿರುವ ಹೇಳಿಕೆ ವಿರುದ್ಧ ಬಾಲಿವುಡ್ ನಟಿ ಸೋನಂ ಕಪೂರ್ ಕಿಡಿಕಾರಿದ್ದಾರಲ್ಲದೆ ಈ ಕುರಿತಂತೆ ಟ್ವೀಟ್ ಮಾಡಿ ಭಾಗ್ವತ್ ಅವರ ಹೇಳಿಕೆ `ಪ್ರತಿಗಾಮಿ'ಯಾಗಿದೆ ಎಂದಿದ್ದಾರೆ.
ಫೆಬ್ರವರಿ 16ರಂದು ಅಹ್ಮದಾಬಾದ್ನಲ್ಲಿ ಆರೆಸ್ಸೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಭಾಗವತ್, "ಶಿಕ್ಷಣ ಹಾಗೂ ಶ್ರೀಮಂತಿಕೆ ಅಹಂಕಾರವನ್ನೂ ತರುವುದರಿಂದ ಕುಟುಂಬಗಳು ದೂರವಾಗುತ್ತಿವೆ. `ಶಿಕ್ಷಿತ ಹಾಗೂ ಶ್ರೀಮಂತ' ಕುಟುಂಬಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗಿವೆ'' ಎಂದು ಹೇಳಿದ್ದರು.
ಇದಕ್ಕೆ ತೀಕ್ಷ್ಣವಾಗಿ ಸ್ಪಂದಿಸಿ ಟ್ವೀಟ್ ಮಾಡಿರುವ ಸೋನಂ ಕಪೂರ್ ``ಯಾವ ವಿವೇಕಿ ಮನುಷ್ಯ ಈ ರೀತಿ ಮಾತನಾಡಬಲ್ಲ ? ಪ್ರತಿಗಾಮಿ, ಮೂರ್ಖ ಹೇಳಿಕೆಗಳು'' ಎಂದು ಬರೆದಿದ್ದಾರಲ್ಲದೆ ಜತೆಗೆ ಭಾಗವತ್ ಹೇಳಿಕೆಯ ಸುದ್ದಿ ಪತ್ರಿಕೆಯ ಕ್ಲಿಪ್ಪಿಂಗ್ ಅನ್ನೂ ಪೋಸ್ಟ್ ಮಾಡಿದ್ದಾರೆ.
Which sane man speaks like this? Regressive foolish statements https://t.co/GJmxnGtNtv
— Sonam K Ahuja (@sonamakapoor) February 16, 2020