ಚೀನಾ ಕೊರೋನ: ಗುರುವಾರ ವುಹಾನ್ನಿಂದ ಭಾರತೀಯರ ತೆರವು
ಹೊಸದಿಲ್ಲಿ, ಫೆ.18: ಚೀನಾದಲ್ಲಿ ಕೊರೋನ ವೈರಸ್ ಹಾವಳಿಯಿಂದ ತತ್ತರಿಸಿರುವ ವುಹಾನ್ ನಗರದಲ್ಲಿನ ಭಾರತೀಯರನ್ನು ತೆರವುಗೊಳಿಸಲು ಗುರುವಾರ ಭಾರತೀಯ ವಾಯುಪಡೆಯ ಸಿ-17 ಸೇನಾವಿಮಾನವನ್ನು ಅಲ್ಲಿಗೆ ತೆರಳಲಿದೆ. ಇದರ ಜೊತೆಗೆ ಚೀನಾಗೆ ವೈದ್ಯಕೀಯ ಸಾಮಗ್ರಿಗಳನ್ನು ಕೂಡಾ ರವಾನಿಸಲಾಗುವುದು ಎಂದು ಸೇನಾ ಮೂಲಗಳು ತಿಳಿಸಿವೆ.
ಭಾರತೀಯ ವಾಯುಪಡೆಯ ಅತಿದೊಡ್ಡ ಸೇನಾವಿಮಾನವಾಗಿರುವ ಸಿ-17 ಗ್ಲೋಬ್ಟ್ರೊಟರ್ ಚೀನಾಗೆ ಬೃಹತ್ ಪ್ರಮಾಣದಲ್ಲಿ ವೈದ್ಯಕೀಯ ಸಾಮಗ್ರಿಗಳನ್ನು ಕೊಂಡೊಯ್ಯಲಿದೆ ಹಾಗೂ ವುಹಾನ್ ನಗರದಲ್ಲಿರುವ ಭಾರತೀಯರನ್ನು ತಾಯ್ನಿಡಿಗೆ ಕರೆತರಲಿದೆ ಎಂದು ಮೂಲಗಳು ತಿಳಿಸಿವೆ.ಕಳೆದ ವಾರ ಭಾರತವು ವುಹಾನ್ ನಗರದಿಂದ 647 ಭಾರತೀಯರು ಹಾಗೂ ಏಳು ಮಂದಿ ಮಾಲ್ದೀವ್ಸ್ ಪ್ರಜೆಗಳನ್ನು ವಾಯುಪಡೆಯ ಎರಡು ಬೋಯಿಂಗ್ 747 ವಿಮಾನಗಳಲ್ಲಿ ವಾಪಸ್ ಕರೆತಂದಿತ್ತು.
Next Story