ಪಾಕಿಸ್ತಾನವನ್ನು ಸದಾ ಬೆಂಬಲಿಸಲು ಸಾಧ್ಯವಿಲ್ಲ ಎಂಬುದು ಚೀನಾಕ್ಕೆ ಮನವರಿಕೆಯಾಗಿದೆ: ಜ ನರವಾಣೆ
ಹೊಸದಿಲ್ಲಿ, ಫೆ.20: ತನ್ನ ಸಾರ್ವಕಾಲಿಕ ಋತು ಮಿತ್ರನನ್ನು ಸದಾ ಬೆಂಬಲಿಸಲು ಸಾಧ್ಯವಿಲ್ಲ ಎಂಬುದು ಚೀನಾಕ್ಕೆ ಕೂಡಾ ಮನವರಿಕೆಯಾಗಿದೆ ಎಂದು ಸೇನಾ ಮುಖ್ಯಸ್ಥ ಜ ಎಂಎಂ ನರವಾಣೆ ಹೇಳಿದ್ದಾರೆ.
ಪಾಕಿಸ್ತಾನವು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುವುದನ್ನು ತಡೆಯಲು ವಿಫಲವಾಗಿರುವುದಕ್ಕೆ ಅದನ್ನು ಎಫ್ಎಟಿಎಫ್ ಬೂದು ಪಟ್ಟಿಯಲ್ಲಿಯೇ ಮುಂದುವರಿಸಿರುವುದನ್ನು ಉಲ್ಲೇಖಿಸಿದ ಅವರು , ಈಗ ಪಾಕಿಸ್ತಾನ ತನ್ನ ಧೋರಣೆಯ ಬಗ್ಗೆ ಮರು ಚಿಂತನೆ ನಡೆಸಲೇಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದೆ ಎಂದು ಹೇಳಿದರು.
ಪಾಕಿಸ್ತಾನ ಚೀನಾದ ಪರಮಾಪ್ತ ದೇಶವಾಗಿದ್ದರೂ ಸದಾಕಾಲ ಪಾಕಿಸ್ತಾನವನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂಬುದು ಚೀನಾಕ್ಕೆ ತಡವಾಗಿಯಾದರೂ ಜ್ಞಾನೋದಯವಾಗಿದೆ ಎಂದವರು ಹೇಳಿದರು.
Next Story