ಸಾಬರಮತಿ ಆಶ್ರಮಕ್ಕೆ ಟ್ರಂಪ್ ಭೇಟಿ
ಅಹ್ಮದಾಬಾದ್, ಫೆ.24: ಭಾರತಕ್ಕೆ ಆಗಮಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಜರಾತ್ ನ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದರು.
ಅಶ್ರಮದಲ್ಲಿ ಟ್ರಂಪ್ ದಂಪತಿಯನ್ನು ಖಾದಿ ಶಾಲು ಹೊದಿಸಿ ಸ್ವಾಗತಿಸಲಾಯಿತು. ಚರಕದ ಬಗ್ಗೆ ಮತ್ತು ಆಶ್ರಮದ ಬಗ್ಗೆ ಟ್ರಂಪ್ ಗೆ ಪ್ರಧಾನಿ ಮೋದಿ ಮಾಹಿತಿ ನೀಡಿದರು. ರಾಷ್ಟ್ರಪಿತ ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಹಾರಾರ್ಪಣೆಗೈದು ಅವರು ನಮಿಸಿದರು. ಟ್ರಂಪ್ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ "ಶ್ರೇಷ್ಠ ಸ್ನೇಹಿತ ಪ್ರಧಾನ ಮಂತ್ರಿ ಮೋದಿಗೆ ಈ ಅಪೂರ್ವ ಭೇಟಿಗೆ ಕೃತಜ್ಞತೆಗಳು ”ಎಂದು ಬರೆದಿದ್ದಾರೆ.
ಸುಮಾರು 15 ನಿಮಿಷಗಳ ಕಾಲ ಸಾಬರಮತಿ ಆಶ್ರಮದಲ್ಲಿದ್ದ ಟ್ರಂಪ್ ದಂಪತಿ ಅಲ್ಲಿಂದ ಜಗತ್ತಿನ ಅತ್ಯಂತ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಮೊಟೆರಾ ಸ್ಟೇಡಿಯಂನತ್ತ ತೆರಳಿದರು.
Next Story