ದಿಲ್ಲಿಯಲ್ಲಿ ಹಿಂಸಾಚಾರ: ಮಸೀದಿಗೆ ಬೆಂಕಿ ಹಚ್ಚಿ ಹನುಮಾನ್ ಧ್ವಜ ಹಾರಿಸಿದ ದುಷ್ಕರ್ಮಿಗಳು
ವಿಡಿಯೋ ವೈರಲ್
ಹೊಸದಿಲ್ಲಿ: ಇಲ್ಲಿನ ಅಶೋಕ್ ನಗರ ದಲ್ಲಿ ದುಷ್ಕರ್ಮಿಗಳ ತಂಡವೊಂದು 'ಜೈಶ್ರೀರಾಮ್', 'ಹಿಂದೂವೋನ್ ಕಾ ಹಿಂದುಸ್ತಾನ್' ಎಂಬ ಘೋಷಣೆಗಳನ್ನು ಕೂಗುತ್ತಾ ಮಸೀದಿಯೊಂದಕ್ಕೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ದುಷ್ಕರ್ಮಿಗಳು ಮಸೀದಿಯ ಮಿನಾರದಲ್ಲಿ ಹನುಮಾನ್ ಧ್ವಜವನ್ನು ಹಾರಿಸಿದ್ದಾರೆ.
ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಮಸೀದಿಯ ಕಾಂಪೌಂಡ್ ಬಳಿಯಿರುವ ಹಲವು ಅಂಗಡಿಗಳನ್ನು ದುಷ್ಕರ್ಮಿಗಳು ಲೂಟಿಗೈದಿದ್ದಾರೆ. ಆದರೆ ಈ ಕೃತ್ಯ ಎಸಗಿದವರು ಸ್ಥಳೀಯರಲ್ಲ ಎಂದು ಹಿಂದೂ ಬಾಹುಳ್ಯದ ಪ್ರದೇಶವಾದ ಅಶೋಕ್ ನಗರ ನಿವಾಸಿಗಳು ಹೇಳುತ್ತಾರೆ.
ಇಲ್ಲಿ ಕೆಲವೇ ಕೆಲವು ಮುಸ್ಲಿಂ ಕುಟುಂಬಗಳು ವಾಸವಾಗಿವೆ. ಸ್ಥಳದಲ್ಲಿ ಕೆಲವು ಅಗ್ನಿಶಾಮಕ ದಳ ವಾಹನಗಳು ಇದ್ದದ್ದು ಬಿಟ್ಟರೆ , ಪೊಲೀಸರು ಯಾರೂ ಇರಲಿಲ್ಲ ಎಂದು ವರದಿಯಾಗಿದೆ.
Hindutva goons climb up a minaret and vandalise a mosque in North East Delhi with impunity, while Muslims are lynched in the streets. Shame on you, @ArvindKejriwal. This blood is on your hands too. pic.twitter.com/LY8pFAjlVg
— namaah against RSS/CAB/NRC/BJP (@thehappyn00dle) February 25, 2020
The Hindutva Terrorists are now planting saffron flag in mosques. All of them have been given free hand to carry out arson across Delhi. #DelhiRiots #DelhiBurning
— Md Salim (@salimdotcomrade) February 25, 2020
pic.twitter.com/nksGCjMVZV