ಕೊಲ್ಕತ್ತಾದಲ್ಲಿ ಅಮಿತ್ ಶಾ ರ್ಯಾಲಿ: 'ಗೋಲಿ ಮಾರೋ' ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು
ವಿಡಿಯೋ ವೈರಲ್
ಕೊಲ್ಕತ್ತಾ: ದ್ವೇಷಭಾಷಣಗಳ ಕಾರಣದಿಂದ ನಡೆದ ದಿಲ್ಲಿ ಹಿಂಸಾಚಾರ ದೇಶವನ್ನು ಬೆಚ್ಚಿಬೀಳಿಸಿರುವ ನಡುವೆ ಇಂದು ಕೊಲ್ಕತ್ತಾದಲ್ಲಿ ನಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರ್ಯಾಲಿಗೆ ತೆರಳುತ್ತಿದ್ದಾಗ ಬಿಜೆಪಿ ಕಾರ್ಯಕರ್ತರು 'ಗೋಲಿ ಮಾರೋ' ಘೋಷಣೆ ಕೂಗಿದ ಬಗ್ಗೆ ವರದಿಯಾಗಿದೆ.
ಇಂದು ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಮಿತ್ ಶಾ ಅವರು ಭಾಗವಹಿಸಿದ್ದರು. ಬಿಜೆಪಿ ಧ್ವಜ ಹಿಡಿದ ಕಾರ್ಯಕರ್ತರು 'ದೇಶ್ ಕೆ ಗದ್ದಾರೋಂಕೋ ಗೋಲಿ ಮಾರೋ ಸಾಲೋಂಕೊ' ಎನ್ನುವ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
'Goli maro' slogan by BJP supporters going to @AmitShah rally at Shahid Minar in Kolkata today.pic.twitter.com/cLTF7oOeBm
— Mohammed Zubair (@zoo_bear) March 1, 2020
Next Story